ಕಲಬುರಗಿ : ರಾಜ್ಯದಲ್ಲಿ 195 ತಾಲೂಕು ಬರ ಪೀಡಿತ ಎಂದು ರಾಜ್ಯ ಸರ್ಕಾರ ಸಮೀಕ್ಷೆ ಮಾಡಿದೆ ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ, ಕೇಂದ್ರ ಹಣ ಬಿಡುಗಡೆ ಮಾಡಿದರೆ ಕರ್ನಾಟಕದ ಜನ ಬದುಕು ಕಟ್ಟಿಕೊಳ್ಳಲಿ ಎಂಬುದು ಸಿದ್ದರಾಮಯ್ಯರವರ ಮನಸ್ಥಿತಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾನುವಾರುಗಳಿಗೆ ಗೋ ಶಾಲೆಗಳನ್ನು ತೆರೆಯುವ ಅವಶ್ಯಕತೆಯಿದೆ, ಹಿಂದಿನ ನಮ್ಮ ಯಡಿಯೂರಪ್ಪನವರ ಸರ್ಕಾರದಲ್ಲಿ ಒಂದು ಮನೆ ಕುಸಿದರೆ, 5 ಲಕ್ಷ ರೂ ಘೋಷಣೆ ಮಾಡಿದ್ದರು ಎಂದು ತಿಳಿಸಿದರು.
195 ತಾಲೂಕು ಬರ ಪೀಡಿತ ಆಗಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ , ಜಾನುವಾರುಗಳಿಗೆ ಗೋ ಶಾಲೆ, ಬೀಜ ಸಮಸ್ಯೆಗೆ ಪರಿಹಾರ ನೀಡುತ್ತೇವೆ, ರಾಜ್ಯ ರೈತರು ಆತಂಕ ಪಡೆಯುವ ಅಗತ್ಯ ಇಲ್ಲವಲ್ಲ, ರಾಜ್ಯ ಮುಖ್ಯಮಂತ್ರಿ ರೈತರಿಗೆ ಹೇಳಬೇಕು ತಾನೇ, ಅದನ್ನು ಬಿಟ್ಟು ಕೇಂದ್ರ ಸರ್ಕಾರ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರ ಸರ್ಕಾರ ಕಾಗದ ಸರ್ಕಾರ ಇಲ್ಲವೆಂದು ಜನ ಭಾವಿಸಿದ್ರೂ, ಅದು ಸುಳ್ಳು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ, ಪರಿಷ್ಟ ಜಾತಿ ಪರಿಷ್ಟ ಪಂಗಡಕ್ಕೆ ವಿನಿಯೋಗ ಆಗಬೇಕಾದ ಹಣ ಗ್ಯಾರಂಟಿಗಳಿಗೆ ಉಪಯೋಗಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಮೂವತ್ತನಾಲ್ಕು ಕೋಟಿ ರೂ ಶೇ ಇಪ್ಪತ್ತನಾಲ್ಕರಷ್ಟು ಎಸ್ಸಿ ಎಸ್ಟಿ ಗೆ ವಿನಿಯೋಗ ಆಗಬೇಕು ಎಂಬ ನಿಯಮವಿದೆ ಎಸ್ಸಿ ಎಸ್ಟಿ ಹಣ ಬಿಟ್ಟು ಒಂದು ರೂಪಾಯಿ ಸಹ ಸರ್ಕಾರದ ಖಜಾನೆಯಿಂದ ಗ್ಯಾರಂಟಿಗಳಿಗೆ ನೀಡಿಲ್ಲ ಎಂದರು.
ಇದನ್ನೂ ಓದಿ : ‘ಕೆ.ಎನ್. ರಾಜಣ್ಣನಿಗೆ ಹೈಕಮಾಂಡ್, ಸಿಎಂ ಉತ್ತರ ಕೊಡ್ತಾರೆ’
ಚೈತ್ರಾ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವರು, ಮೋಸಕ್ಕೆ ಒಳಗಾಗುವವರು ಜಾಗೃತ ಆಗಬೇಕು, ಭಾರತೀಯ ಜನತಾ ಪಕ್ಷ ಹಣಕ್ಕೆ ಟಿಕೆಟ್ ನೀಡುವ ಪಕ್ಷವಿಲ್ಲ, ಕೂಲಿ ಮಾಡುವ ಕೋಟ ಶ್ರೀನಿವಾಸ ಎಂಬ ಒಬ್ಬ ಸಾಮಾನ್ಯ ಕಾರ್ಯಕರ್ತ 4 ಸಲ ಕ್ಯಾಬಿನೆಟ್ ಸಚಿವನಾಗಬೇಕಾದರೆ ಹಣ ತೆಗೆದುಕೊಂಡು ಮಾಡಿದ್ದಾರಾ ? ಯಾರೇ ಹಣ ತೆಗೆದುಕೊಳ್ಳಲಿ, ತನಿಖೆ ಮಾಡಿ, ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಆಗಲಿ, ಲೋಕಸಭೆವರೆಗೆ ಸಹ ಗ್ಯಾರಂಟಿಗಳು ಇರುತ್ತೆ ಎಂಬ ಭರವಸೆ ಇಲ್ಲ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.