ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯನವ್ರು 5 ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ನನ್ನನ್ನು ಸೇರಿದಂತೆ ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂದಿದ್ದರು. ಹೀಗಾಗಿ ಕರ್ನಾಟಕದ 1.5 ಕೋಟಿ ಕುಟುಂಬಕ್ಕೆ ಈ ಯೋಜನೆ ಸಿಗಬೇಕು, ಹೀಗಾಗಿ 200 ಯುನಿಟ್ ವಿದ್ಯುತ್‌ಗೆ ಯಾರೂ ಹಣ ಪಾವತಿಸುವುದು ಬೇಡ ಎಂದು ಕರೆ ನೀಡಿದರು.
ನಿರುದ್ಯೋಗಿ ಪದವೀಧರರಿಗೆ ಪ್ರತೀ ತಿಂಗಳು 3000 ರು ಸಿಗಲಿ, ಅದೇ ರೀತಿಯಲ್ಲಿ ಅಕ್ಕಿ ಕೊಡೋದು ಇದೆ, ಅವರು ಹೇಳಿದಂತೆ ವ್ಯಕ್ತಿಯೊಬ್ಬರಿಗೆ 10 ಕೆ.ಜಿ ಉಚಿತವಾಗಿ ಕೊಡಲಿ, ಮನೆಯ ಒಡತಿಗೆ 2000 ಕೊಡೋದಾಗಿ ಹೇಳಿದ್ದರು. ಜೊತೆಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿದ್ದರು. ಅವರು ಹೇಳಿದಂತೆ ಜೂನ್ ನಿಂದ ಮಹಿಳೆಯರು ಬಸ್ ಟಿಕೆಟ್ ಪಡೆಯದೇ ಪ್ರಯಾಣಿಸಬೇಕು, ಎಲ್ಲ ಮಹಿಳೆಯರು ಇದ್ರ ಸದುಪಯೋಗಪಡೆಯಿರಿ ಎಂದರು.
ನಾವು ಹೇಳಿದಂತೆ ನಡೆದುಕೊಳ್ತೇವೆ ಎಂದು ಹೇಳುವ ಸರ್ಕಾರ, ಗ್ಯಾರಂಟಿಗಳನ್ನು ಒದಗಿಸದೇ ಇದ್ದರೆ ನಾವು ಸೇರಿಕೊಂಡು ನ್ಯಾಯ ಕೊಡಿಸ್ತೇವೆ, ರಾಜ್ಯದ ಫಲಾನುಭವಿಗಳು ಇದೇತಿಂಗಳಿನಿಂದ ಕೈ ಗ್ಯಾರಂಟಿ ಯೋಜನೆ ಪಡೆದುಕೊಳ್ಳಬೇಕು, ಹೋರಾಟಕ್ಕಿಳಿದು ಜನರಿಗೆ ನ್ಯಾಯ ಕೊಡಿಸಲು ಸಿದ್ದ ಎಂದು ತಿಳಿಸಿದರು.