ಬೆಂಗಳೂರು: ನೀರಿನ ವಿಚಾರವನ್ನ ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳೋ ವಿಚಾರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಹೇಳಿದರು.
ಇವತ್ತಿನ ಕೆಆರ್‌ಎಸ್ ಮಟ್ಟ 97 ಅಡಿ ಇದೆ, ಕಬಿನಿಯಲ್ಲಿ ನೀರು 5.1 ಟಿಎಂಸಿ ಇದೆ, ಒಟ್ಟಾರೆಯಾಗಿ 43.19 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ, ನೀರಿನ ಪ್ರಮಾಣ 37 ಟಿಎಂಸಿ, 120ಟಿಎಂಸಿ ಕಂಡೀಷನ್ಸ್ ಪ್ರಕಾರ ತಮಿಳುನಾಡಿಗೆ ಬಿಡಬೇಕಾಗಿತ್ತು ಎಂದರು.
ಇದನ್ನೂ ಓದಿ: ಇಂದಿನಿಂದ ಏಟಿಗೆ ಏಟು, ಯಾರಿಗೂ ಹೆದರೋ ಮಾತೆ ಇಲ್ಲ; ಬಾಲಯ್ಯ
ಸೆಪ್ಟೆಂಬರ್ ಹೊತ್ತಿಗೆ 33 ಟಿಎಂಸಿ ಬಿಡಬೇಕಾಗಿತ್ತು, ಸಿಡಬ್ಯೂಆರ್‌ಸಿ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಅವರ ಕೆಲಸ ಏನು ಅಂದ್ರೆ ನೀರು ಬಿಡೋ ಕೆಲಸ, ಸುಪ್ರೀಂಕೋರ್ಟ್ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಒಂದು ಗೆಜೆಟ್ ಮಾಡ್ತಾರೆ, ಆಗ ಕಾವೇರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗುತ್ತೆ ಅಲ್ಲಿಗೆ ನಮ್ಮಕೈ ಕಟ್ಟಿ ಹಾಕಲಾಗುತ್ತೆ ಎಂದು ಕಿಡಿಕಾರಿದರು.
114 ಗೇಟ್ಸ್ ಎಲೆಕ್ಟೋ ಕಂಟ್ರೋಲ್ ಗೇಟ್ ಆಗಿದೆ, ಡೆಲ್ಲಿನಲ್ಲೇ ಕುಳಿತುಕೊಂಡು ಎಲ್ಲ ಕಂಟ್ರೋಲ್ ಮಾಡಲಾಗುತ್ತೆ, ಈ ತರಹ ವ್ಯವಸ್ಥೆ ಎಲ್ಲವೂ ಕೇಂದ್ರ ಸರ್ಕಾರವೇ ಮಾಡಿದೆ, 26 ಮಾನಿಟರಿಂಗ್ ಅಥಾರಿಟಿ ಸಭೆ ಮಾಡಿದ್ದಾರೆ, 177.25 ಟಿಎಂಸಿ ಸಾಮಾನ್ಯ ವರ್ಷದಲ್ಲಿ ನೀರನ್ನ ಬಿಡಬೇಕಾಗುತ್ತೆ, ಇದರ ಫಾರ್ಮುಲಾವನ್ನ ಕಂಡುಹಿಡಿಯಬೇಕು , ಅದು ಸರಳ ಫಾರ್ಮುಲಾ ಅದಕ್ಕಾಗಿ ಇಸ್ರೋ ಮಾದರಿಯಲ್ಲಿ ರಾತ್ರಿಯೆಲ್ಲಾ ಕುಳಿತುಕೊಳ್ಳುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್‌ಗೆ ಹಿಂದೆ ಪಾಪ ಅಂತಾ ವೋಟ್ ಹಾಕಿದ್ರು , ಕುಮಾರಸ್ವಾಮಿ ಪಕ್ಷ ಸೋತ್ರೆ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದರು. ಆದರೆ ಎಲ್ಲಿ ಸ್ವಾಮಿ ಮಾಡಿದ್ರಿ ? ಮೈತ್ರಿ ಮಾಡಿ ಬಿಜೆಪಿಯ ಬಿ ಟೀಂ ಎಂದು ಸಾಬೀತು ಮಾಡಿದ್ರಿ ಬಿಜೆಪಿ ಅವರ ಯೋಗ್ಯತೆಗೆ ಒಬ್ಬ ಅಧ್ಯಕ್ಷ ಆಯ್ಕೆ ಮಾಡೋಕೆ ಆಗಿಲ್ಲ ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.