ಹಾವೇರಿ : ನಾವು ಅಧಿಕಾರಕ್ಕೆ ಬಂದರೆ ಬಸವಣ್ಣನಾಣೆ, ಕುವೆಂಪು, ಕನಕ-ಷರೀಫರ ಆಣೆ ಉಚಿತ ವಿದ್ಯುತ್ ನೀಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ’ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೊಸ ಆರ್ಥಿಕ ನೀತಿ ಘೋಷಣೆ ಮಾಡಿದ್ದೇವೆ ಎಂದರು.ಬಿಜೆಪಿಯವರು ಎಲ್ಲಿಂದ ಕರೆಂಟ್ ತಂದುಕೊಡುತ್ತೀರಿ ? ಎಂದು ಪ್ರಶ್ನಿಸುತ್ತಿದ್ದಾರೆ.
‘ಮುಖ್ಯಮಂತ್ರಿಗಳೇ, ನೀವು ಇಲ್ಲವೇ, ನಿಮ್ಮ ಸಚಿವರನ್ನು ನಮ್ಮೊಂದಿಗೆ ಕಳುಹಿಸಿ ಎಲ್ಲಿಂದ ಕರೆಂಟ್ ತರುತ್ತೇವೆ ಎಂಬುದನ್ನು ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.
ಜ. 27ರ ಬಳಿಕ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಅರ್ಜಿ ನಮೂನೆ ಕಳುಹಿಸುತ್ತೇವೆ. ಅದನ್ನು ತುಂಬಿಕೊಟ್ಟಿರುವ ಮೇಲೆ ಎಷ್ಟುಬಜೆಟ್ ಲೆಕ್ಕ ಹಾಕಲು ಅನುಕೂಲ ಆಗಲಿದೆ , ಹಾವೇರಿಯಲ್ಲಿ ನಡೆದ ಪ್ರಜಾಧ್ವನಿ ಬಿಜೆಪಿ ಸರ್ಕಾರದ 3 ವರ್ಷದ ಪಾಪದ ಪುರಾಣ ಎಂಬ ಕರಪತ್ರ ಬಿಡುಗಡೆಗೊಳಿಸಿದ್ದೇವೆ ಎಂದರು.