ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇಲೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ.
ಕೆಪಿಸಿಸಿಯ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೌಗಂಧಿಕ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ದೇವರಿಗೆ ಕೈ ಮುಗಿದು ಫೋಟೊ ಹಾಕುವಂತೆ ಕರೆ ನೀಡಿದ್ದರು. ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ಸೌಗಂಧಿಕ ಅವರು, ದೇವರ ಪೂಜೆಗಿಂತ ವಿಜ್ಞಾನಿಗಳ ಶ್ರಮಕ್ಕೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸೋಣ ಎಂದಿದ್ದರು.


ಈ ಕಮೆಂಟ್ ಗೆ ‘ಅವರ ಸಂಘಟನೆಯ ಕಾರ್ಯಕರ್ತ ದೇವರಿಗೆ ಪೂಜೆ ಸಲ್ಲಿಸಿದ್ದು ಅವರು ಹಾಕೊಂಡ್ರೆ, ನಿನಗೆ ಎಲ್ಲಿ ಯಾಕೆ ಉರಿ ಬಂತೋ ಗೊತ್ತಾಗಲಿಲ್ಲ’ ಎಂದು ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಸೂಲಿಬೆಲೆ ಕಮೆಂಟ್ ಗೆ ಸೌಗಂಧಿಕ ರಘುನಾಥ್ ಕೂಡ ತಿರುಗೇಟು ಕೊಟ್ಟಿದ್ದು, ಒಂದು ಹೆಣ್ಣಿಗೆ ಉರಿ ಅಂತ ಮಾತನಾಡುವ ಕೀಳು ಮಟ್ಟಕ್ಕೆ ಇಳಿದಿದ್ದೀಯ ಸೂಲಿಬೆಲೆ? ಅಥವಾ ನಿನ್ನ ಹೆಸರಲ್ಲಿ ಯಾರಾದರು ಅಡ್ನಾಡಿ ಕಮೆಂಟ್ ಮಾಡಿದ್ದರೆ ಕರೆದು ಉಗಿ. ಇಲ್ಲ ಅಂದರೆ ನಿನ್ನ ಯೋಗ್ಯತೆ ಬೀದಿಗೆ ಬರಬಹುದು. ಈ ಸೂಲಿಬೆಲೆ ಸಂಸ್ಕಾರ ನೋಡಲಿ ಎಲ್ಲ ಥು ನಾಚಿಕೆಗೇಡು’ ಎಂದಿದ್ದಾರೆ.
ಸೂಲಿಬೆಲೆಯ ಕಮೆಂಟ್ ಸಂಬಂಧ ಅವಹೇಳನಕಾರಿಯಾಗಿ ತೇಜೋವದೆ ಮಾಡಿದ್ದಾರೆ ಎಂದು ಆರೋಪಿಸಿ ಸೌಗಂಧಿಕ ದೂರು ದಾಖಲಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.