ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆಶಿ ಇಬ್ಬರನ್ನೂ ಪರಿಗಣಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ,ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. “ಇಬ್ಬರಿಗೂ ಅವಕಾಶ ಸಿಗಬೇಕು ಎಂದರು. ಪಕ್ಷ ಸಂಘಟನೆ ಮತ್ತು ಸವಾಲುಗಳನ್ನು ಎದುರಿಸುವಾಗ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಾಮರ್ಥ್ಯ ಡಿಕೆ ಶಿವಕುಮಾರ್ ಅವರಿಗಿದೆ. ಡಿಕೆ.ಶಿವಕುಮಾರ್ ರಂತಹ ನಾಯಕ ಇನ್ನಾವುದೇ ಪಕ್ಷದಲ್ಲಿಯೂ ಇಲ್ಲ. ಹೀಗಾಗಿ ಇಬ್ಬರೂ ನಾಯಕರಿಗೂ “ಮನ್ನಣೆ” ನೀಡಬೇಕಿದೆ ಎಂದರು.
ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಜಯ ಸಿಗಲಿದೆ ಎಂದು ಭವಿಷ್ಯ ಹೇಳಿದೆ, ಅದು ನನ್ನ ಅಭಿಪ್ರಾಯ ಕೂಡ ಹೌದು ಎಂದು ಹೇಳಿದರು.ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ಬಹುಮತ ಪಡೆದರೆ ಯಾರು ಅಧಿಪತಿ ಎಂಬ ಬಗ್ಗೆ ಪಕ್ಷದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ. ಸಮೀಕ್ಷಾ ವರದಿಗಳು ಕಾಂಗ್ರೆಸ್ ನಾಯಕರ ಹುಮ್ಮಸ್ಸು ಹೆಚ್ಚಿಸಿದೆ. ಇನ್ನೇನೂ ಎಲ್ಲರ ಭವಿಷ್ಯ ನಿರ್ಧಾರ ಆಗಲಿದೆ.