ಬೆಂಗಳೂರು : ವಿಧಾನಸಭೆ ಚುನಾವಣೆ ನಡೆಯಲು ಕೆಲವೇ ತಿಂಗಳುಗಳು ಬಾಕಿ ಇದ್ದು, ತಮ್ಮನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ತಾವು ಕಳಂಕಿತರಲ್ಲ ಎಂದು ಉತ್ತರ ನೀಡಲು ಅವಕಾಶ ನೀಡಬೇಕು ಎಂದು ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಳಂಕದ ಆರೋಪ ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಾಗಿದೆ, ಅಷ್ಟೇ ಅಲ್ಲದೇ ರಾಜಕೀಯ ವಿರೋಧಿಗಳಿಗೆ ನವು ಕಳಂಕ ರಹಿತರು ಎಂದು ಉತ್ತರ ನೀಡಲು ಮಂತರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಮೀಷನ್ ಕೇಳಿದ ಆರೋಪದ ಮೇಲೆ ಕೆ ಎಸ್ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲೈಂಗಿಕ ದುರ್ಬಳಕೆ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ರೀಸೈನ್ ಮಾಡಿದ್ದರು.
ಕ್ಲೀನ್ ಚೀಟ್ ಸಿಕ್ಕ ತಕ್ಷಣ ಮಂತ್ರಿ ಮಂಡಲ ಸೇರುವ ಆಸಕ್ತಿ ಹೊಹಾಕಿದ್ದರು, ಇದೀಗ ಮತ್ತೆ ಸಂಪುಟ ಸೇರಬೇಕೆನ್ನುವ ಬಯಕೆ ಹೊರಹಾಕಿದ್ದಾರೆ. ಮತ್ತು ಸಚಿವರಾಗಿ ನೇಮಿಸದೇ ಇದ್ದರೆ ತಮ್ಮ ಮೇಲಿನ ಕಳಂಕ ಮಾಸೋದಿಲ್ಲ ಎಂದು ಹೇಳಿದ್ದಾರೆ.