ಶಿವಮೊಗ್ಗ: ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ವಿಚಾರವನ್ನು ಪಕ್ಷದ ಹಿರಿಯರಿಗೆ ಮಾತ್ರ ತಿಳಿಸಿದ್ದೇನೆ, ಕಾರ್ಯಕರ್ತರನ್ನು ಕೇಳಿದರೆ ಒಪ್ಪುತ್ತಿರಲಿಲ್ಲ ಎಂದು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಸಭೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ವಿಚಾರ ಪ್ರಸ್ತಾಪ ಮಾಡಲಿಲ್ಲ. ಆದರೆ, ವೈಯಕ್ತಿಕವಾಗಿ ತಿಳಿಸಿದ್ದೆ ಎಂದು ತಿಳಿಸಿದರು. ಅಮಿತ್ ಷಾ ನನಗೂ ಜಗದೀಶ್ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದನ್ನು ನೋಡಿದ್ದೇನೆ. ಆದರೆ, ನನಗೆ ಮನಸ್ಸು ಒಪ್ಪದ ಕಾರಣ ರಾಜೀನಾಮೆ ಪತ್ರ ಬರೆದಿದ್ದೇನೆ ನಾನು ಕಾರ್ಯಕರ್ತರಿಗೆ ತಿಳಿಸದೇ ಧಿಡೀರ್ ನಿರ್ಧಾರ ಮಾಡಿದ್ದೆ, ಯಾರೂ ನೊಂದುಕೊಳ್ಳಬಾರದು ಎಂದರು.
ಕೆ ಎಸ್ ಈಶ್ವರಪ್ಪ ರಾಜೀನಾಮೆ ಘೋಷಿಸ್ತಿದ್ದಂತೆ ಮನೆ ಮುಂದೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರು ಜಮಾಯಿಸಿದ್ದು, ತಮ್ಮ ನಿರ್ಧಾರ ವಾಪಸ್ ಪಡೆಯಲು ಒತ್ತಾಯಿಸಿದ್ದರು.