ಶಿವಮೊಗ್ಗ: ನನ್ನ ವಿರುದ್ಧ ಎಷ್ಟು ಪ್ರತಿಭಟನೆ ಮಾಡಿದರೂ ನಾನು ಎದುರಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೂಂದಿಗೆ ಮಾತನಾಡಿ, ಬೇರೆಯವರಿಗೆ ತೊಂದರೆ ಆಗದ ರೀತಿಯಲ್ಲಿ ಆಜಾನ್ ಕೂಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಬಳಸುವುದು ನಿಷೇಧ ಎಂದು ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಕೂಡಾ ಈ ರೀತಿ ಮಾಡುತ್ತಾರೆ ಎಂದು ಗರಂ ಆದರು.
ಆಜಾನ್ ಕೂಗೋದ್ರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆ ಆಗ್ತಿದೆ ಅಂತಾ ಪೋಷಕರಿಗೆ ಗೊತ್ತು ಹಾಗೂ ಆಸ್ಪತ್ರೆಯಲ್ಲಿರೋ ರೋಗಿಗಳಿಗೆ ಗೊತ್ತು ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಮಾತ್ರ ಅಸಮಾಧಾನ ಇರುವವರನ್ನು ಕರೆದು ಮಾತನಾಡಿಸುವ ಪದ್ಧತಿ ಇದೆ. ಕೇಂದ್ರದ ನಾಯಕರು ಸೋಮಣ್ಣನ ಜೊತೆ ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಕೆಲವರಿಗೆ ಬೇಸರ ಆಗುತ್ತಿರುತ್ತದೆ ಎಂದು ಹೇಳಿದರು.ಸರಿ ಎನ್ನುವುದಾದರೆ ಅದನ್ನು ಎದುರಿಸಬೇಕು. ಪ್ರತಿಭಟನೆ ಸರಿಯಲ್ಲ ಎನ್ನುವುದಾದರೆ ಅದನ್ನು ತಿದ್ದಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.