ಬಾಗಲಕೋಟೆ : ಕಾಂಗ್ರೆಸ್ನಲ್ಲಿ ಯಾರ ನೇತೃತ್ವ? ಕ್ಷೇತ್ರ ಗೊತ್ತಿಲ್ಲ, ಜನರು ಓಟ್ ಕೊಟ್ಟು ಗೆಲ್ಲಿಸಿಲ್ಲ. ಆಗಲೇ ನಾನೇ ಮುಖ್ಯಮಂತ್ರಿ ಅಂತಿದ್ದೀರಿ. ಕರ್ನಾಟಕದ ರಾಜಕಾರಣದಲ್ಲಿ ಇಂಥ ದ್ರೋಹಿ ಯಾರೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಬೊಮ್ಮಾಯಿ ವೀಕ್ ಲೀಡರ್ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇವರು, ಮಾಜಿ ಸಿಎಂ ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು? ಯಾವಾಗಲೂ ಯಾರು ವೀಕ್ ಅಂತಾ ಹೇಳ್ತಾರೋ ಅವರೇ ವೀಕ್ ಎಂದು ಬಸವರಾಜ್ ಬೊಮ್ಮಾಯಿ ವೀಕ್ ಲೀಡರ್ ಅಂತ ಪದೇ ಪದೇ ಹೇಳ್ತಿರೋ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಬಾದಾಮಿ, ಮತ್ತೊಮ್ಮೆ ಕೋಲಾರ, ವರುಣಾ ಅಂತೀರಿ. ನಿಮಗೆ ನಿಮ್ಮ ಅಪ್ಪ-ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ. ಕ್ಯಾಪ್ಟನ್ಗೆ ಪ್ಲೇಸ್ ಇಲ್ಲ, ಪಾಪ ಫಾಲೋವರ್ಸ್ ಗತಿಯೇನು? ಮಾಜಿ ಸಿಎಂ ಸಿದ್ದರಾಮಯ್ಯ ಆಡುವ ಆಟ ಬಿಜೆಪಿ ಮೇಲೆ ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್ನಲ್ಲಿ ಮಾತ್ರ ನಡೆಯುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ಮಂತ್ರಿ ಆಗು ಅಂದರೆ ಆಗ್ತೀನಿ ಬೇಡ ಅಂದ್ರೆ ಶಾಸಕನಾಗಿರುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.