ಬೆಂಗಳೂರು : 2013ರಲ್ಲಿ ಬಿಜೆಪಿ ಒಡೆದು ಮೂರು ಭಾಗ ಆಗಿರಲಿಲ್ಲ ಅಂದರೆ ಸಿದ್ದರಾಮಯ್ಯ ಈ ಜನ್ಮದಲ್ಲಿ ಸಿಎಂ ಆಗ್ತಾಇರಲಿಲ್ಲ ಪ್ರತಿನಿತ್ಯ ಯಡಿಯೂರಪ್ಪನವರ ಫೋಟೋ ಮನೆಯಲ್ಲಿಟ್ಟು ಪೂಜೆ ಮಾಡಬೇಕು ಎಂದು ಕುಟುಕಿದ್ದಾರೆ.
ಆಗಲೀ ಯಾರು ಬೇಡ ಅಂತಾರೇ ಅವರೇ ತೆಗೆದುಕೊಂಡು ಹೋಗಿ ಸಿಎಂ ಸ್ಥಾನದಲ್ಲಿ ಕೂರಿಸಲಿ ಯಾರೋ ಒಬ್ಬರು ತೀರ್ಮಾನ ಮಾಡುವುದಕ್ಕೆ ಬರಲ್ಲ ಎಂದು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಬಸಪ್ರಭು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ರಾಜ್ಯದ ಜನ ಸರ್ಕಾರ ಏನ್ ಕೆಲಸ ಮಾಡಿದೆ. ಇನ್ನೂ ಬಿಜೆಪಿ ಒಡೆಯುವ ಪ್ರಶ್ನೆ ಇಲ್ಲ ಏಕತೆಯಿಂದ ಇದ್ದೇವೆ ಅಂದಿಗಿಂತ ಇಂದು ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ ಮೋದಿ ಅವರ ನಾಯಕತ್ವದ ಜೊತೆಗೆ ಅಭಿವೃದ್ಧಿ ಕೆಲಸ, ಸಂಘಟನೆ ಸಹ ಇದೆ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಯಾರೋ ಸ್ವಾಮೀಜಿ ಹೇಳಿದರೆ ಆಗಲ್ಲ ರಾಜ್ಯದ ಜನರು ಅದನ್ನು ತೀರ್ಮಾನ ಮಾಡಬೇಕು ಆ ಜನ ಬಿಜೆಪಿ ಪರವಾಗಿ ಇದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಐದು ವರ್ಷನೂ ಇಲ್ಲಿ ಬಂದು ಆಳ್ವಿಕೆ ಮಾಡಕ್ಕೆ ಬರಲ್ಲ ಒಂದು ಸರಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಬಂದು ಹೋದರು ಹಾಗಾದ್ರೆ ಭಾರತ ಜೋಡ್ಸಿ ಬಿಟ್ರಾ ರಾಹುಲ್ ಗಾಂಧಿಗೆ ದೇಶ ನೋಡುವ ಅವಕಾಶ ಸಿಕ್ತು. ಅದಕ್ಕಾಗಿ ನಾನು ಸಂತೋಷ ಪಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನ ಟೀಕಿಸಿದ್ದಾರೆ.