ಬೆಂಗಳೂರು: ಕಾಂಗ್ರೆಸ್ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ, ಸಿಎಂ , ಡಿಸಿಎಂ ಜನರ ಬಳಿ ಕ್ಷಮೆ ಕೇಳಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ,ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಸ್ಕಿಂ ಕೊಡಲ್ಲ ಎಂಬ ಡಿಸಿಎಂ ಡಿಕೆಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.ಎಲೆಕ್ಷನ್ ಮುಂಚೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ರು, ಆದ್ರೆ ಹಾದಿ ಬೀದಿಲಿ ಹೊಗೋರಿಗೆಲ್ಲ ಕೊಡೊಕ್ಕಾಗಲ್ಲ ಎಂದು ಹೇಳಿದ್ದಾರೆ ಈಗ, ಮತ್ತೇ ಅದೇ ಜನರ ಎದುರು ಲೋಕಸಭೆ ಚುನಾವಣೆಗೆ ಮತ ಕೇಳಲು ಹೋಗಬೇಕು ನೆನಪಿರಲಿ ಅಂತಾ ಕಿಡಿಕಾರಿದ್ರು. ಆಗ ಹಾದಿ ಬೀದಿಲಿರೋ ಬಳಿ ಮತ ಕೇಳಬೇಡಿ ಅಂತಾ ಇವರಿಬ್ಬರಿಗೆ ಛೀಮಾರಿ ಹಾಕಿ ಮನೆಗೆ ಕಳಿಸ್ತಾರೆ ಎಂದರು.
ಚುನಾವಣೆ ಮೊದಲು ಎಲ್ಲರಿಗೂ ಉಚಿತ ಅಂತ ಭರವಸೆ ಕೊಟ್ರು, ಈಗ ಕಾಂಗ್ರೆಸ್ ಮಾತು ಬದಲಿಸ್ತಿದೆ ಎಂದು ಆಕ್ರೋಶಿಸಿದರು. ಇನ್ನೂ ಇದೇ ವಿಚಾರವಾಗಿ ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ಆಕ್ರೋಶಿಸಿದ್ದಾರೆ.