ಬೆಂಗಳೂರು : ಸ್ಯಾಂಟ್ರೊ ರವಿ ರಾಜ್ಯದಿಂದ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ. ರಾಜ್ಯ ಬಿಟ್ಟು ಹೋಗೋವರೆಗೆ ಏನು ಮಾಡುತ್ತಿದ್ದರು? ಪೊಲೀಸ್ ಇಲಾಖೆ ಬದುಕಿದ್ಯಾ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಗುಜರಾತ್ನಿಂದ ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ಣುತಪ್ಪಿಸಿ ರಾಜಾತಿಥ್ಯ ಕೊಟ್ಟು ಪೊಲೀಸರು ಕರೆದೊಯ್ದಿದ್ದಾರೆ.
ರವಿಗೆ ಯಾವ ರೀತಿ ರಾಜಾತಿಥ್ಯ ನೀಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಏರ್ಪೋರ್ಟ್ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಐಪಿ ಗೇಟ್ನಲ್ಲಿ ಸ್ಯಾಂಟ್ರೋ ರವಿಗೆ ಯಾಕೆ ಬಿಡುತ್ತಾರೆ? ಏರ್ಪೋರ್ಟ್ ವಿಐಪಿ ಗೇಟ್ ಇರೋದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ ಎಂದು ಪ್ರಶ್ನಿಸಿದರು.
ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ 2-3 ದಿನದ ಹಿಂದೆಯೇ ಬಂಧಿಸಿದ್ದಾರೆ. ಬಿಜೆಪಿಯವರು ದೇಶದಲ್ಲಿ ಏನ್ ಬೇಕಿದ್ದರೂ ಮಾಡುತ್ತಾರೆ ಎಂದು ಕಿಡಿಕಾರಿದರು.