ಕೊಡಗು: ರಾಜ್ಯದ ಯಾವುದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದರೂ ಅವರನ್ನು ದೇವೇಗೌಡರೇ ನಿರ್ಧರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಹಾಸನದಿಂದ ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡುವ ವಿಚಾರವಾಗಿ ರೇವಣ್ಣ ಅವರಾಗಲೀ ಅಥವಾ ಕುಮಾರಸ್ವಾಮಿ ಅವರಾಗಲೀ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು. ನಾನೂ ಕೂಡ ಹಾಸನದಿಂದ ಸಂಸದ ಆಗಬೇಕೆಂದು ಬಯಸಿರಲಿಲ್ಲ. ನಾನು ಎಂಎಲ್‌ಎ ಕ್ಷೇತ್ರವನ್ನು ಮಾತ್ರ ಕೇಳಿದ್ದೆ, ಆದರೆ, ದೇವೇಗೌಡರೇ ಸಂಸದ ಆಗು ಅಂದಿದ್ದರು ಎಂದು ತಿಳಿಸಿದರು.
ಭವಾನಿ ರೇವಣ್ಣ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಆಗುವ ವಿಚಾರ ದೊಡ್ಡವರಿಗೆ ಬಿಟ್ಟದ್ದಾಗಿದೆ ಎಂದರು. ಹಾಸನದಿಂದ ಸ್ಪರ್ಧೆ ಮಾಡುವುದಕ್ಕೆ ಭವಾನಿ ರೇವಣ್ಣ ಅವರಿಗೆ ಆಸೆಯಿದೆ. ಹೀಗೆ ಶಾಸಕರಾಗಿ ಆಯ್ಕೆ ಆಗುವುದಕ್ಕೆ ಆಸೆ ಇರೋದು ತಪ್ಪಾ.? ಎಂದು ಪ್ರಶ್ನಿಸಿದರು.
ಹಾಸನ ಸಾಲಗಾಮೆ ಹೋಬಳಿ, ಕಕ್ಕೇನಹಳ್ಳಿ ಗ್ರಾಮದಲ್ಲಿ ಭವಾನಿ ರೇವಣ್ಣ ಮಾತನಾಡಿ, ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿ ಕೆಲವು ಕೆಲಸ, ಕಾರ್ಯಗಳು ಉಳಿದುಕೊಂಡಿವೆ. ಈ ಬಾರಿ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೊಂಡಿದ್ದಾರೆ ಎಂದರು.