Monday, March 20, 2023
spot_img
- Advertisement -spot_img

ಮಹಿಳಾ ನ್ಯಾಯವಾದಿಗಳು ತಮ್ಮ ತಲೆಗೂದಲನ್ನು ಸರಿಪಡಿಸಿಕೊಳ್ಳುವಂತಿಲ್ಲ

ಪುಣೆ : ಮಹಿಳಾ ನ್ಯಾಯವಾದಿಗಳು ಕೋರ್ಟ್‌ನಲ್ಲಿ ತಮ್ಮ ತಲೆಗೂದಲನ್ನು ಸರಿಪಡಿಸಿಕೊಳ್ಳುವಂತಿಲ್ಲ ಎಂಬ ಕೋರ್ಟ್‌ ಸೂಚನೆ ನೀಡಿದೆ. ಪುಣೆಯ ಜಿಲ್ಲಾ ನ್ಯಾಯಾಲಯ ಈ ಆದೇಶದ ಮೂಲಕ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಓಪನ್‌ ಕೋರ್ಟ್‌ನಲ್ಲಿ ಮಹಿಳಾ ನ್ಯಾಯವಾದಿಗಳು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ.

ಅವರ ಈ ಕ್ರಿಯೆಯು ಕೋಟ್ ಕಾರ್ಯನಿರ್ವಹಣೆಗೆ ಅಡಚಣೆಯನ್ನುಂಟು ಮಾಡುತ್ತಿದೆ. ಆದ್ದರಿಂದ ಇಂಥ ಕ್ರಿಯೆಯಿಂದ ದೂರ ಉಳಿಯಬೇಕೆಂದು ಮಹಿಳಾ ನ್ಯಾಯವಾದಿಗಳಿಗೆ ಸೂಚಿಸಲಾಗುತ್ತಿದೆ ಎಂದು ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸಲಾದ ಸೂಚನೆಯಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಪುಣೆ ಕೋರ್ಟ್ ನೀಡಿರುವ ಆದೇಶವನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡ ಬಳಿಕ, ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.

Related Articles

- Advertisement -

Latest Articles