ಚಿಕ್ಕೋಡಿ : ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಹೋದ ಲಕ್ಷ್ಮಣ ಸವದಿ, ಮಹೇಶ್ ಕುಮಟಳ್ಳಿ ಹೆಸರು ಕೆಡಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಲಖನ್ ಜಾರಕಿ ಹೊಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಅಥಣಿ, ಬೆಳಗಾವಿ ಗ್ರಾಮದಲ್ಲಿ ಗೆಲುವು ಸಾಧಿಸ್ತೇವೆ, 14 ಸ್ಥಾನ ಗೆಲ್ಲುತ್ತೇವೆ, ಅಭಿವೃದ್ಧಿಗೋಸ್ಕರ ರಮೇಶ್ ಜಾರಕಿಹೊಳಿ ಅಥಣಿಗೆ ಬರ್ತಾರೆ ಹೊರತು ಬೇರೆ ಉದ್ದೇಶಕ್ಕೆ ಅಲ್ಲ ಎಂದರು.
ರಮೇಶ್ ಜಾರಿಹೊಳಿ 6 ಬಾರಿ ಗೋಕಾಕ್ ಕ್ಷೇತ್ರ ಗೆದ್ದ ಜನಪರ ಕೆಲಸಗಾರ. ಈಗೀನ ಕಾಲದಲ್ಲಿ ದಬ್ಬಾಳಿಕೆ, ಗುಂಡಾಗಿರಿ ಏನೂ ನಡೆಯಲ್ಲ, ಸುಮ್ಮನೆ ಅಪಪ್ರಚಾರ ಮಾಡ್ತಾ ಇದ್ದಾರೆ,ಸವದಿ ನೇರವಾಗಿ ಬಿಜೆಪಿಯಲ್ಲಿ ಎಲ್ಲಿ ಬೇಕೋ ಅಲ್ಲಿ ಡ್ಯಾಮೇಜ್ ಮಾಡಿ, ಕೈ ಪಕ್ಷಕ್ಕೆ ಹೋಗಿದ್ದಾರೆ, ಅಲ್ಲಿಯೂ ಟಿಕೆಟ್ ಸಿಗದಿದ್ರೆ ಜೆಡಿಎಸ್ ಸೇರ್ತಿದ್ರು ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮಹೇಶ್ ಕುಮಟಳ್ಳಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಲೆ ಇರೋದ್ರಿಂದ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ, ನಾಗನೂರಕ್ಕೆ ಹೋದಾಗ ಅಡಚಣೆ, ದಬ್ಬಾಳಿಕೆ ಮಾಡಿದ್ರು, ನನಗೆ ಹೀಗೆ ಮಾಡಿದ್ದಾರೆ, ಇನ್ನೂ ಸಾಮಾನ್ಯರಿಗೆ ಹೇಗೆ ಎಂದು ಅರ್ಥ ಮಾಡಿಕೊಳ್ಳಿ ಎಂದರು.
ಇನ್ನೂ ಯಾರು ಪಕ್ಷಕ್ಕೆ ದ್ರೋಹ ಬಗೆದು ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುತ್ತಾರೋ, ಅಂಥವರಿಗೆ ಹೆಚ್ಚು ಬಿಜೆಪಿಯಲ್ಲಿ ಮಣೆ ಹಾಕಲಾಗುತ್ತಿದೆ. ನಾನು ಜಗದೀಶ ಶೆಟ್ಟರ, ಸೊಗಡು ಶಿವಣ್ಣ, ಆಯನೂರ ಮಂಜುನಾಥ, ರಾಮದಾಸ್ ಸೇರಿ ಸುಮರು 37 ಪ್ರಾಮಾಣಿಕರನ್ನು ಬಿಜೆಪಿ ಹೊರಹಾಕಿ ಕಳ್ಳರಿಗೆ, ಸುಳ್ಳರಿಗೆ, ಅನಾಚಾರಿಗಳಿಗೆ ಮಣೆ ಹಾಕಲಾಗಿದೆ. ಇದು ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದ್ದರು.