Monday, December 11, 2023
spot_img
- Advertisement -spot_img

ಯಾವುದೇ ಚಿಲ್ಲರೆ ಮಾತು, ಹೋರಾಟಕ್ಕೆ ನಾನು ಬೆಲೆ ಕೊಡಲ್ಲ: ಲಕ್ಷ್ಮಣ ಸವದಿ

ಚಿಕ್ಕೋಡಿ: ಅಥಣಿಯಲ್ಲಿ ಯಾರೋ ಬಂದು ನಟನೆ ಮಾಡುವುದು ಬಹಳ ಕಠಿಣ ಇದೆ, ಯಾವುದೇ ಚಿಲ್ಲರೆ ಮಾತು, ಹೋರಾಟಗಳಿಗೆ ನಾನು ಬೆಲೆ ಕೊಡಲ್ಲ, ಗಮನಾನೂ ಹರಿಸಲ್ಲ ಎಂದು
ರಮೇಶ ಜಾರಕಿಹೊಳಿಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಟಾಂಗ್ ಕೊಟ್ಟಿದ್ದಾರೆ.

ಅಥಣಿಯಲ್ಲಿ ಸರಕಾರಿ ಅಧಿಕಾರಿಗಳು ಸವದಿ ಅವರ ಕೈಗೊಂಬೆಯಾಗಿದ್ದಾರೆ ಎಂಬ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೋ ತಾಲೂಕಿನ ಯಾರೋ ಬಂದ್ರೂ‌ ಅಥಣಿಯಲ್ಲಿ ಏನು ಮಾಡೋಕಾಗಲ್ಲ, ಅಥಣಿಯ ಯಾವೊಬ್ಬ ಸರಕಾರಿ ಅಧಿಕಾರಿ ಯಾರ ಕೈಗೊಂಬೆಯಲ್ಲ, ಅವರು ಅಂಬೇಡ್ಕರ್ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡ್ತಾರೆ, ಆರೋಪ ಮಾಡುವವರು ಏನ್ ಬೇಕಾದ್ರೂ ಆರೋಪ ಮಾಡ್ತಾರೆ ಎಂದು ಕಿಡಿಕಾರಿದರು.

ಅಥಣಿಯಲ್ಲಿ ಸರಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದನ್ನು ವಿರೋಧಿಸಿ ಪಕ್ಷದ ನಾಯಕನ ಆಯ್ಕೆಯಾದ ನಂತರ ಮೊದಲ ಭಾರಿ ಅಥಣಿಯಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ರಮೇಶ ಜಾರಕಿಹೊಳಿ ಹೇಳಿದ್ದರು.

ಇದನ್ನೂ ಓದಿ: INDIA ಒಕ್ಕೂಟದ ಮೊದಲ ರ‍್ಯಾಲಿ ರದ್ದು!

ನಾವು ಕಾಂಗ್ರೆಸ್‌ ಸರ್ಕಾರ ಕೆಡವಿದಾಗ ಅದಕ್ಕೊಂದು ಬೇರೆ ಕಾರಣ ಇತ್ತು. ನಾವು ಯಾರೂ ಆಪರೇಷನ್‌ಗೆ ಒಳಗಾಗಿರಲಿಲ್ಲ. ಸ್ವತಃ ನಾವೇ ನಿರ್ಧಾರ ಮಾಡಿ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಜತೆ ಕೈಜೋಡಿಸಿದ್ದೆವು. ಆಗ ಅಂತಹ ಪರಿಸ್ಥಿತಿ ಇತ್ತು. ಫಲಿತಾಂಶದ ಬಳಿಕ ಆರು ತಿಂಗಳ ಕಾಲ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ ಮೂರೇ ತಿಂಗಳಲ್ಲಿ ಈ ಸರ್ಕಾರದ ಬಗ್ಗೆ ಮಾತನಾಡುವ ಪರಿಸ್ಥಿತಿ ಬಂದಿದೆ ಎಂದಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles