Thursday, June 8, 2023
spot_img
- Advertisement -spot_img

ಬಿಎಸ್​ವೈಗೆ ಶೆಟ್ಟರ್ ಹಾಗೂ ನನ್ನ ಬಗ್ಗೆ ಮಾತಾಡೋ ಹಕ್ಕಿಲ್ಲ: ಲಕ್ಷ್ಮಣ್‌ ಸವದಿ

ಅಥಣಿ: ‘ನನ್ನ ಹಾಗೂ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡುವ ಹಕ್ಕು ಬಿಎಸ್​ವೈಗೆ ಇಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಬಿಎಸ್​ವೈ ಅತ್ಯಂತ ಗೌರವಾನ್ವಿತರು, ಅವರ ಬಗ್ಗೆ ಹೆಚ್ಚು ಹೇಳೋಕೆ ಹೋಗಲ್ಲ. ಬೇರೆಯವರ ಬಗ್ಗೆ ಟೀಕೆ ಮಾಡುವ ಹಕ್ಕು ಅವರಿಗಿಲ್ಲ. ಸ್ವಲ್ಪ ಹಿಂದಿನ ವಿಚಾರ ಮೆಲುಕು ಹಾಕಿ ಬೇರೆಯವರನ್ನ ಟೀಕೆ ಮಾಡಲಿ , ಪಕ್ಷವನ್ನು ಮುಳುಗಿಸಿದ ಕೀರ್ತಿ ಬಿ.ಎಸ್ .ಯಡಿಯೂರಪ್ಪಗೆ ಸಲ್ಲುತ್ತದೆ ಎಂದರು. ಇನ್ನೂ ರಾಜ್ಯದಲ್ಲಿ 125 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿ, ಇನ್ನೂ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷ ಬಿಟ್ಟ ಲಕ್ಷ್ಮಣ ಸವದಿ ಯಾವ ಸ್ಥಿತಿಗೆ ತಲುಪುತ್ತಾರೆ ಎಂದು ಕಾದುನೋಡಿ ಎಂದು ವ್ಯಂಗ್ಯವಾಡಿದ್ದಾರೆ.

ಸುಮಾರು 60 ಹೊಸ ಮುಖಗಳಿವೆ. ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳ ಪಟ್ಟಿ ಇದಾಗಿದೆ. ಕಾಂಗ್ರೆಸ್‍ನ ಸ್ಥಿತಿ ಚಿಂತಾಜನಕ, ಕಷ್ಟದಾಯಕವಾಗಿದೆ. ಬೇರೆ ಪಕ್ಷದಿಂದ ಬಂದವರಿಗಾಗಿ ಕಾಯುವ ಸ್ಥಿತಿ ಇತ್ತು ಎಂದು ಹೇಳಿದ್ದಾರೆ.

Related Articles

- Advertisement -spot_img

Latest Articles