Wednesday, May 31, 2023
spot_img
- Advertisement -spot_img

ನಾನು ಭ್ರಷ್ಟಾಚಾರ ಮಾಡಿದ್ದೀನಾ? ರೇಪ್ ಮಾಡಿದ್ದೀನಾ? : ಲಕ್ಷ್ಮಣ್‌ ಸವದಿ ಪ್ರಶ್ನೆ

ಬೆಂಗಳೂರು: ನನಗೆ ಟಿಕೆಟ್‌ ಕೈ ತಪ್ಪಲು ಕೆಲ ಬಿಜೆಪಿ ನಾಯಕರೇ ಕಾರಣ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ್‌ ಸವದಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಯಾವ ಅಪರಾಧ ಮಾಡಿದ್ದೇನೆ ? ಪದವಿ ಕೊಟ್ಟು ಕಸಿದಿದ್ದು ಏಕೆ? ನಾನೇನು ಕಳ್ಳತನ ಮಾಡಿದ್ದೇನಾ?, ಭ್ರಷ್ಟಾಚಾರ ಮಾಡಿದ್ದೀನಾ? ರೇಪ್ ಮಾಡಿದ್ದೀನಾ ?ಯಾರದ್ದಾದರೂ ಸೀರೆ ಜಗಿದ್ದೇನಾ? ಎಂದು ನಾಯಕರಿಗೆ ಪ್ರಶ್ನಿಸಿದ್ದಾರೆ.

ನಾನು ಉಪಮುಖ್ಯಮಂತ್ರಿ ಆಗಿದ್ದೆ ಯಾಕೆ ಹಠಾತ ಆಗಿ ನನ್ನ ಗಮನಕ್ಕೆ ತರದೆ ಯಾಕೆ ಕಸಿದುಕೊಂಡ್ರಿ? ಪಕ್ಷ ನನಗೆ ಸೋತ ಸಂಧರ್ಭದಲ್ಲಿ ಕೊಟ್ಟ ಅವಕಾಶ ದೊಡ್ಡದು, ಟೀಕೆ ಮಾಡೋದಿಲ್ಲ, ಒಬ್ಬರಿಗೂ ಕೆಡಕು ಬಯಸಲ್ಲ,ಅಸೂಯೆಯೂ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇನ್ನೂಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ನಾಯಕರೆಲ್ಲರೂ ಸ್ವಾಗತಿಸುತ್ತೇವೆ. ಲಕ್ಷ್ಮಣ ಸವದಿ ಜೊತೆ ನಾವು ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಸಂಜೆ 4 ಗಂಟೆಗೆ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಖಂಡಿತವಾಗಿಯೂ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ಇದೆಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

Related Articles

- Advertisement -

Latest Articles