ಬೆಳಗಾವಿ: ರಾಜ್ಯದ ಜನರಿಗೆ ಕೊಟ್ಟ 5 ಭರವಸೆ ಈಡೇರಿಸುವ ಕಡೆಗೆ ನಾವು ಗಮಹರಿಸಿದ್ದೇವೆ ಎಂದು ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ಆ ಜವಾಬ್ದಾರಿ ನಿಭಾಯಿಸುತ್ತೇನೆ. ನಾನು ಅದರ ಬಗ್ಗೆ ಏನು ಮಾತನಾಡಲ್ಲ. 135 ಜನ ಗೆದ್ದಿದ್ದೇವೆ ಕರ್ನಾಟಕದ ಮಹಾಜನತೆ ಆಶೀರ್ವಾದ ಮಾಡಿದ್ದಾರೆ ಎಂದರು. ಪಕ್ಷ ನನಗೆ ಬಹಳಷ್ಟು ಅವಕಾಶ ನೀಡಿದ್ದು, ಈಗ ಸಚಿವೆಯಾಗಿ ಕೆಲಸ ಮಾಡು ಅಂದ್ರೆ ನಿರ್ವಹಿಸುತ್ತೀನಿ, ಆದರೆ ನನ್ನ ಪರ ಯಾರೂ ಲಾಬಿ ಮಾಡ್ತಾ ಇಲ್ಲ ಎಂದರು.
ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ. ಹೈಕಮಾಂಡ್‍ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯರಿಗೆ ಭಾಷೆ ಕೊಟ್ಟಿದ್ದೆವು. ಜಿಲ್ಲೆಯ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲೋದಾಗಿ ಹೇಳಿದ್ವಿ, ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ. ಬಹಳ ಧೈರ್ಯದಿಂದ ಸಿಎಲ್‍ಪಿ ಸಭೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.