ಬೆಂಗಳೂರು: ಘಟಾನುಘಟಿ ನಾಯಕರ ನಡುವೆ ಕಾಂಗ್ರೆಸ್ 2 ನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ ಜಿಲ್ಲೆಗೆ ಒಂದೇ ಸ್ಥಾನ ಸಿಕ್ಕಿದ್ದು, ಲಕ್ಷ್ಮೀ ಹೆಬ್ಬಾಳಕರ್ ಗೆ ಒಲಿದಿದೆ
.ಇನ್ನೂ ಕಮಲ ಬಿಟ್ಟು ಕೈ ಸೇರಿ ಭಾರಿ ಅಂತರದಿಂದ ಗೆದ್ದಿದ್ದ ಅಥಣಿ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಸಚಿವ ಸ್ಥಾನ ಕೈ ತಪ್ಪಿ ಹೋಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ರಾಮದುರ್ಗ ಕ್ಷೇತ್ರದಿಂದ 3 ಬಾರಿ ಗೆದ್ದಿರುವ ಶಾಕ ಅಶೋಕ ಪಟ್ಟಣ , ಬೈಲಹೊಂಗಲದಿಂದ 4 ಬಾರಿ ಗೆದ್ದಿರುವ ಶಾಸಕ ಮಹಾಂತೇಶ ಕೌಜಲಗಿ, ಗಣೇಶ್ ಹುಕ್ಕೇರಿಗೆ ಸಚಿವ ಸ್ಥಾನ ಕೈ ತಪ್ಪಿದೆ.
ಇನ್ನೂ ಮೊದಲ ಬಾರಿಗೆ ಮಂತ್ರಿ ಸ್ಥಾನ ಸಿಕ್ಕಿದ ಸಂತಸದಲ್ಲಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರೀಗ ಅಜ್ಜಿಯಾದ ಖುಷಿಯಲ್ಲಿದ್ದಾರೆ. ಮಂತ್ರಿ ಸ್ಥಾನ ಲಭಿಸಿದ ದಿನವೇ ಮನೆಗೆ ಮೊಮ್ಮಗಳ ಆಗಮನವಾಗಿದೆ.ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ಒದಗಿ ಬಂದಿದೆ.
ಪ್ರಮಾಣವಚನ ಸ್ವೀಕಾರ ಖುಷಿ ಒಂದೆಡೆಯಾದರೆ, ಅಜ್ಜಿಯಾದ ಸಂತಸ ಮತ್ತೊಂದೆಡೆ. ಲಕ್ಷ್ಮೀ ಹೆಬ್ಬಾಳ್ಕರ್ ಸೊಸೆ ಹಿತಾ ಹೆಬ್ಬಾಳ್ಕರ್ ಮೇ.26ರ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣು ಮಗು ಜನಿಸಿದ್ದಕ್ಕೆ ಹೆಬ್ಬಾಳ್ಕರ್ ಖುಷಿಯಾಗಿದ್ದಾರೆ. ನನಗೆ ಇಂದು ಡಬಲ್ ಧಮಾಕ ಹೊಡೆದಿದೆ.
ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ಅದರ ಜತೆಗೆ ನನಗೆ ಮೊಮ್ಮಗಳು ಹುಟ್ಟಿದ್ದಾಳೆ, ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ,