Tuesday, November 28, 2023
spot_img
- Advertisement -spot_img

ಮತದಾರ ಪ್ರತಿಜ್ಞೆ ಮಾಡಿದರೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಗಿಫ್ಟ್

ಬೆಳಗಾವಿ: ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಮತದಾರರಿಗೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸುತ್ತಿದ್ದಾರೆ. ಹೆಬ್ಬಾಳ್ಕರ್ ಬೆಂಬಲಿಗರು ದೇವರ ಪ್ರತಿಜ್ಞೆ ಮಾಡಿಸುವ ಮತ್ತು ಆಮಿಷ ನೀಡುವ ವೀಡಿಯೊಗಳು ವೈರಲ್ ಆಗಿವೆ.

ಹೆಬ್ಬಾಳ್ಕರ್ ತಂಡ ಪವಿತ್ರವಾದ ತೆಂಗಿನಕಾಯಿ ಮತ್ತು ಅರಿಶಿನವನ್ನು ಹಿಡಿದುಕೊಂಡು ಮನೆ-ಮನೆಗೆ ಹೋಗುತ್ತಾರೆ. ತೆಂಗಿನಕಾಯಿಯನ್ನು ಮುಟ್ಟಿ ಹಾಲಿ ಶಾಸಕರಿಗೆ ತಮ್ಮ ಮತ ಹಾಕುವುದಾಗಿ ಮತದಾರರಿಂದ ಪ್ರತಿಜ್ಞೆ ಮಾಡಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಪ್ರತಿಜ್ಞೆ ಮಾಡಿದರೆ ಮತದಾರರ ಮನೆಗಳಿಗೆ ಗಿಫ್ಟ್ ಗಳು ಹರಿದು ಬರುತ್ತವೆ. ಚುನಾಯಿತ ಪ್ರತಿನಿಧಿಗಳು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಮೂಲಕ ಉಚಿತ ಕೊಡುಗೆಗಳನ್ನು ನೀಡುವ ಬದಲು ಜನರ ಸಮಸ್ಯೆ ಪರಿಹರಿಸಿ ಸೌಲಭ್ಯ ಒದಗಿಸಬೇಕು,ಎಂದು ಮತದಾರರು ಆಗ್ರಹಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ನಮ್ಮ ಪ್ರದೇಶಗಳಿಗೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ. ನಾವು ದುಬಾರಿ ಉಡುಗೊರೆಗಳನ್ನು ಬಯಸುವುದಿಲ್ಲ, ಆದರೆ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುತ್ತೇವೆ. ದೇವರ ಹೆಸರಿನಲ್ಲಿ ಜನರನ್ನು ಬ್ಲಾಕ್ ಮೇಲ್ ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದ್ದು, ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಜ್ವರ ಆವರಿಸಿದೆ. ಹಲವು ಮುಂದಿ ಚುನಾವಣೆಗಾಗಿ ದೇವರನ್ನು ಆವಾಹನೆ ಮಾಡುತ್ತಿದ್ದಾರೆ. ಮತದಾರರಿಂದ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ, ಪ್ರತಿಯಾಗಿ ಹಲವು ಉಡುಗೊರೆ ನೀಡುತ್ತಿದ್ದಾರೆ.

Related Articles

- Advertisement -spot_img

Latest Articles