ನವದೆಹಲಿ: ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು ಲಂಡನ್‌ನಲ್ಲಿ 3ನೇ ವಿವಾಹವಾಗಿದ್ದರು. 68 ವರ್ಷದ ಅವರು ಬ್ರಿಟಿಷ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾರೆ. ಈ ವಿವಾಹ ಮಹೋತ್ಸವದಲ್ಲಿ ಭಾರತದ ಹತ್ತಾರು ಮಂದಿ ಗಣ್ಯರು ಭಾಗಿಯಾಗಿದ್ದರು.
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ, ಸುನಿಲ್ ಮಿತ್ತಲ್, ಎಲ್‌ಎನ್ ಮಿತ್ತಲ್, ಎಸ್‌ಪಿ ಲೋಹಿಯಾ ಮತ್ತು ಗೋಪಿ ಹಿಂದುಜಾ ಸೇರಿದಂತೆ ಇತರ ಪ್ರಮುಖ ಉದ್ಯಮಿಗಳು ಕಾಣಿಸಿಕೊಂಡಿದ್ದರು. ಆದರೆ ಅಚ್ಚರಿ ಎಂದರೆ ಲಲಿತ್ ಮೋದಿ ಸಹ ಈ ವಿವಾಹದಲ್ಲಿ ಭಾಗಿಯಾಗಿದ್ದ ಫೋಟೋಗಳು ಹೊರಬಿದ್ದಿದ್ದು, ಭಾರೀ ಸದ್ದು ಮಾಡ್ತಿದೆ.
ಇದನ್ನೂ ಓದಿ: ಇಂದು 6 ರಾಜ್ಯಗಳ 7 ಸ್ಥಾನಗಳಿಗೆ ಉಪಚುನಾವಣೆಗೆ ಮತದಾನ, ಇದು ಇಂಡಿಯಾ ಒಕ್ಕೂಟಕ್ಕೆ ಮೊದಲ ಪರೀಕ್ಷೆ!
2010ರಲ್ಲಿ ದೇಶ ಬಿಟ್ಟು ಲಂಡನ್‌ಗೆ ಪರಾರಿಯಾಗಿದ್ದ ಅವರು ಇದೇ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿ ಅವರು 2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ನಡುವೆಯೇ ಭಾರತ ತೊರೆದಿದ್ದರು. ಬಿಸಿಸಿಐಗೆ 753 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆಯೂ ಲಲಿತ್ ಮೋದಿ ಭಾರತಕ್ಕೆ ಬೇಕಾಗಿರುವ ಆರೋಪಿಯಾಗಿದ್ದಾರೆ.
ಇದನ್ನೂ ಓದಿ: ನ್ಯಾಯಾಲಯಕ್ಕೆ ಗೈರು; ಶಶಿಕಲಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!
ಮದುವೆ ಸಮಾರಂಭದಲ್ಲಿ ಲಲಿತ್ ಮೋದಿ ಹಾಜರಿದ್ದ ಕಾರಣ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಸರ್ಕಾರಿ ಬಿಜೆಪಿ ವಕೀಲರು ಮೂರನೇ ಬಾರಿಗೆ ಮದುವೆಯಾಗುವುದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳುವ ಒಬ್ಬ ಆಹ್ವಾನಿತನ ಉಪಸ್ಥಿತಿ. ಮೋದಿ ಸರ್ಕಾರದ ನೆಚ್ಚಿನ ವಕೀಲರ ವಿವಾಹವನ್ನು ಆಚರಿಸುತ್ತಿದ್ದಾರೆ. ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ, ಯಾರನ್ನು ರಕ್ಷಿಸುತ್ತಾರೆ ಎಂಬುದು ಈಗ ಪ್ರಶ್ನೆಯೇ ಅಲ್ಲ, ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.