ದೆಹಲಿ : ಆರ್‌ಜೆಡಿ ಸಂಸ್ಥಾಪಕ ಹಾಗೂ ನಾಯಕ ಲಾಲೂ ಪ್ರಸಾದ್ ಯಾದವ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈಗ 74 ವರ್ಷದ ಲಾಲೂ ಪ್ರಸಾದ್ ಯಾದವ್‌ಗೆ ಕಿಡ್ನಿಯೊಂದನ್ನು ದಾನ ಮಾಡಲು ಅವರ ಮಗಳು ಮುಂದಾಗಿದ್ದಾರೆ ಎಂದು ಕುಟುಂಬದ ಹತ್ತಿರ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ಅವರು ಸಿಂಗಾಪುರದಿಂದ ಭಾರತಕ್ಕೆ ವಾಪಸಾಗಿದ್ದಾರೆ. ಹಲವು ಆರೋಗ್ಯ ತೊಂದರೆಗಳನ್ನು ಲಾಲೂ ಪ್ರಸಾದ್ ಎದುರಿಸುತ್ತಿದ್ದು, ಈ ಪೈಕಿ ಅವರಿಗೆ ಮೂತ್ರಪಿಂಡ ಅಥವಾ ಕಿಡ್ನಿ ಸಮಸ್ಯೆಯೂ ಇದೆ. ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಈ ಹಿನ್ನೆಲೆ, ತಂದೆಗೆ ಮೂತ್ರಪಿಂಡವೊಂದನ್ನು ಮಗಳು ದಾನ ಮಾಡ್ತಾರೆ ಎಂದು ತಿಳಿದುಬಂದಿದೆ.
ಸಿಂಗಾಪುರ ಮೂಲದ ರೋಹಿಣಿ ಆಚಾರ್ಯ , ತಂದೆ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸುಧಾರಿಸಲು ಹಾಗೂ ಅವರ ಜೀವಕ್ಕೆ ಮತ್ತಷ್ಟು ಚೈತನ್ಯ ನೀಡಲು ಮುಂದಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಖಚಿತಪಡಿಸಿದ್ದು, “ಹೌದು, ಅದು ನಿಜ, ನಾನು ಡೆಸ್ಟಿನಿಯ ಮಗು ಮತ್ತು ನನ್ನ ಕಿಡ್ನಿಯನ್ನು ತಂದೆಗೆ ನೀಡಲು ಹೆಮ್ಮೆಪಡುತ್ತೇನೆ’’ಎಂದು ಸಿಂಗಾಪುರದಲ್ಲಿ ನೆಲೆಸಿರುವ ರೋಹಿಣಿ ಆಚಾರ್ಯ ಹೇಳಿಕೊಂಡಿದ್ದಾರೆ.