Friday, September 29, 2023
spot_img
- Advertisement -spot_img

ಲೋಕಸಭೆ ಎಲೆಕ್ಷನ್‌ ಬಳಿಕ ಮೋದಿ ನಿರ್ಗಮನ ಖಚಿತ : ಲಾಲು

ಜಾರ್ಖಂಡ್‌: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ಮತ್ತೊಮ್ಮೆ ಜನರನ್ನು ವಂಚಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ನಿರ್ಗಮನ ಖಚಿತ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಲೇವಡಿ ಮಾಡಿದ್ದಾರೆ.

ಜಾರ್ಖಂಡ್‌ನ ಪ್ರಸಿದ್ಧ ಬಾಬಾ ಬೈದ್ಯನಾಥ ಧಾಮ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಹಣದುಬ್ಬರ ಮತ್ತು ನಿರುದ್ಯೋಗ ಉತ್ತುಂಗದಲ್ಲಿದೆ, ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಮೋದಿಯವರು ಚುನಾವಣೆಗಾಗಿ ಪ್ರವಾಸ ಮಾಡುತ್ತಾ, ಜನರನ್ನು ಮತ್ತೆ ವಂಚಿಸಲು ಮುಂದಾಗಿದ್ದಾರೆ. ಆದರೆ ಈ ಚುನಾವಣೆ ಬಳಿಕ ಅವರ ನಿರ್ಗಮನ ಖಚಿತ’ ಎಂದರು.

ಇದನ್ನೂ ಓದಿ : ಮೇಕೆದಾಟು ಯೋಜನೆ; ಪ್ರಧಾನಿ ಭೇಟಿಗೆ ಬಿಜೆಪಿ ಸಂಸದರು ಸಮಯ ನಿಗದಿ ಮಾಡಲಿ: ಸಿಎಂ ಸವಾಲ್‌

ಕೇಂದ್ರವು ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತ ಮಾಡಿದೆ. ಚುನಾವಣೆಗೂ ಮುನ್ನ ಜನರನ್ನು ವಂಚಿಸುವ ಉದ್ದೇಶದಿಂದ ಅಡುಗೆ ಅನಿಲ ಬೆಲೆ ಇಳಿಕೆ ಮಾಡಿದ್ದಾರೆ. ನೀವು ಸಿಲಿಂಡರ್‌ ದರ ಕಡಿಮೆ ಮಾಡಿರುವುದು ಜನರ ಹಣದಿಂದಲೇ ಹೊರತು, ಪ್ರಧಾನಿಯ ಹಣದಿಂದಲ್ಲ. ಸೌಲಭ್ಯಗಳಿಗೆ ಬರುತ್ತಿರುವ ಎಲ್ಲ ಹಣವೂ ದೇಶದ ನಾಗರಿಕರಿಂದಲೇ ಬರುತ್ತದೆ ಎಂದು ಗುಡುಗಿದರು.

ಇದನ್ನೂ ಓದಿ : Prajwal Revanna Disqualification: ಬ್ರಹ್ಮ ಬಂದ್ರು ಹೋರಾಟ ನಿಲ್ಸಲ್ಲ : ವಕೀಲ ದೇವರಾಜೆಗೌಡ

ಅಂಬೇಡ್ಕರ್‌ ಹೆಸರಿಗೆ ಚ್ಯುತಿ ಬಾರಲು ಬಿಡಲ್ಲ: ಸಂವಿಧಾನ, ಬಡವರು, ನಿರುದ್ಯೋಗಿಗಳು ಹಾಗೂ ಅಂಬೇಡ್ಕರ್ ಅವರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಲು ನಾವು ಬಿಡುವುದಿಲ್ಲ. ಅಂಬೇಡ್ಕರ್ ಅವರ ಹೆಸರನ್ನು ಅಳಿಸಲು ಅವರು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಬಗ್ಗೆ ಮಾತನಾಡಿ, ಈ ಸಭೆಯಿಂದ ಭಾರತದ ಸಾಮಾನ್ಯ ಜನರಿಗೆ ಏನು ಪ್ರಯೋಜನ? ಜಿ-20 ಶೃಂಗಸಭೆ ದೇಶದಲ್ಲಿ ಆಯೋಜಿಸಲು ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles