ಹಾಸನ: ಬ್ರಹ್ಮ ಬಂದ್ರು, ನನ್ನ ಕಾನೂನು ಹೋರಾಟ ನಿಲ್ಲಿಸುವುದಿಲ್ಲ, ರಾಜಕೀಯವಾಗಿ ಅವರನ್ನು ಬೇರೆ ಸಮೇತ ಕೀಳುವೆ ಎಂದು ವಕೀಲ ದೇವರಾಜೆಗೌಡ, ಪ್ರಜ್ವಲ್ ರೇವಣ್ಣ ಅರ್ಜಿ ನ್ಯಾಯಾಲಯ ವಜಾ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿರುವ ದೇವರಾಜೆಗೌಡ, ನ್ಯಾಯಾಲಯದ ತೀರ್ಪನ್ನು ಗೌರವಯುತವಾಗಿ ಕಾಣಬೇಕು. ಸಮಯಕ್ಕೆ ತಕ್ಕಂತೆ ಯಾವ ರೀತಿ ಕೆಲ್ಸ ಮಾಡಬೇಕು ಅಂತ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯವನ್ನು ಹಗುರವಾಗಿ ಕಾಣಬಾರದು. ಆ ದಿನವೇ ಅರ್ಜಿ ಹಾಕಬೇಕಿತ್ತು. ಇದಲ್ಲದೆ ಕೆಲವು ತಾಂತ್ರಿಕ ಕಾರಣಗಳನ್ನು ಮುಂದೆ ಒಡ್ಡಿ ನಾಲ್ಕು ದಿನ ತಡ ಮಾಡಿದ್ದಾರೆ. ಈಗ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಸೆ.19 ರಂದು ಪಾರ್ಲಿಮೆಂಟ್ ಸೆಷನ್ ನಡೀತಾ ಇದೆ ಅದಕ್ಕೆ ಅವರು ಯಾವುದೆ ರೀತಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ನಿಂದ ಸ್ಟೇ ಸಿಗುವರೆಗು ಅವರು ಪಾರ್ಲಿಮೆಂಟ್ ಹೋಗುವಂತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯ ರಾಜಕೀಯದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ!
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಮಾತನಾಡಿದ ಅವರು, ಮೈತ್ರಿ ವಿಚಾರ ಬೇರೆ ಕೋರ್ಟ್ ಕಾನೂನು ವಿಚಾರವೇ ಬೇರೆ ಮೈತ್ರಿ ಬಗ್ಗೆ ಮಾತು ಆಡುವಷ್ಟು ದೊಡ್ಡವನಲ್ಲ ಎಂದರು.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದು, ಅವರು ಹೊಂದಿರುವ ಆಸ್ತಿಗಳ ನೈಜ ಮೌಲ್ಯವನ್ನು ಮರೆಮಾಚಲಾಗಿದೆ ಎಂಬ ಆರೋಪವಿದೆ. ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹತೆ ಕೋರಿ ಅರ್ಜಿ ಹಾಕಿದ್ದು ವಕೀಲ ದೇವರಾಜೆಗೌಡ. ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ವಾದ ಪ್ರತಿವಾದದ ನಂತರ ಕೋರ್ಟ್ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ : ‘ಗ್ಯಾರಂಟಿ’ ಕೊಟ್ಟು ಜನರನ್ನು ಪರದಾಡುವಂತೆ ಮಾಡಿದ್ದಾರೆ : ಕೆ.ಎಸ್. ಈಶ್ವರಪ್ಪ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.