ಮೈಸೂರು : ಸಂಸದ ಪ್ರತಾಪ್ ಸಿಂಹನಿಗೆ ಸುಳ್ಳು ಹೇಳೋದೆ ಒಂದು ಚಾಳಿ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರೇಟರ್ ಮೈಸೂರು ಮಾಡಲಿಕ್ಕೆ ಸಿದ್ದರಾಮಯ್ಯ ಅಡ್ಡಿಗಾಲು ಅಂತ ಹೇಳಿಕೆ ನೀಡ್ತೀದ್ದೀರಾ..? ಗ್ರೇಟರ್ ಮೈಸೂರು ಮಾಡಲು ಕೆಲ ಮಾನದಂಡಗಳು ಇವೆ, ಗ್ರೇಟರ್ ಮೈಸೂರು ಮಾಡುವುದು ಕೇಂದ್ರ ಸರ್ಕಾರವೋ ಅಥವಾ ರಾಜ್ಯ ಸರ್ಕಾರವೋ ಎಂದು ಪ್ರತಾಪ್ ಸಿಂಹರವರೇ ? ಗ್ರೇಟರ್ ಮೈಸೂರು ಮಾಡೋದು ಯಾರು ಎನ್ನುವ ಸಾಮಾನ್ಯ ಜ್ಞಾನವು ನಿಮಗೆ ಇಲ್ಲವಾ ? ಗ್ರೇಟರ್ ಮೈಸೂರು ಮಾಡಲಿಕ್ಕೆ 200ಕಿಮೀ ವಿಸ್ತೀರ್ಣ ಇರಬೇಕು, ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ 128ಕಿಮೀ ಮಾತ್ರ ಇರೋದು, ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್ ಮೈಸೂರು ಬಗ್ಗೆ ಚಕಾರ ಎತ್ತಲಿಲ್ಲ, ಈಗ ಗ್ರೇಟರ್ ಮೈಸೂರು ನೆನಪಾಯ್ತಾ ? ಎಂದು ಪ್ರಶ್ನಿಸಿದ್ದಾರೆ.
ಸಂಸದರಾಗಿ ಪ್ರತಾಪಸಿಂಹ ಕೊಡುಗೆ ಏನು ? ಸಿದ್ದರಾಮಯ್ಯ ಕೆಲಸಗಳ ದಾಖಲೆ ತರುತ್ತೇವೆ, ನಿಮ್ಮ ಸುಳ್ಳು ನಿಮ್ಮ ಡೋಂಗಿತನ ಎಲ್ಲರಿಗೂ ಗೊತ್ತಿದೆ, ಸಿದ್ದರಾಮಯ್ಯ ಕೈ ಮುಗಿದು ಕಿಡಿಗೇಡಿಗಳನ್ನು ಗೆಲ್ಲಿಸಬೇಡಿ ಅಂತಾ ಕೈ ಮುಗಿದಿದ್ದಾರೆ, ಇದರಲ್ಲಿ ಏನು ತಪ್ಪಿದೆ ? ಎಂದು ಆಕ್ರೋಶಿಸಿದರು.
ಇದನ್ನೂ ಓದಿ : ಪಾರ್ಶ್ವವಾಯುವಿನಿಂದ ಹೆಚ್‌ಡಿಕೆ ಗುಣಮುಖ; ಚಿಕಿತ್ಸೆ ಕೊಟ್ಟ ವೈದ್ಯರು ಹೇಳಿದ್ದೇನು?
ಸಿದ್ದರಾಮಯ್ಯ ವಿರುದ್ಧ ಶಾಸಕ ಜಿ ಟಿ ದೇವೇಗೌಡ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರತಾಪಸಿಂಹ ಬರೆದು ಕೊಟ್ಟ ಸ್ಕ್ರಿಪ್ಟ್ ಇದು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಆರೋಪ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ? ಕುಡಿಯುವ ನೀರಿನ ಯೋಜನೆ ಸೇರಿ ಎಲ್ಲಾ ಮಾಡಿರುವುದು ಸಿದ್ದರಾಮಯ್ಯ, ಈಗ ಜಿ ಟಿ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಾರೆ, ಜಿ ಟಿ ದೇವೇಗೌಡ ಜೊತೆಯೂ ಚರ್ಚೆಗೆ ಸಿದ್ದ ಎಂದು ಸವಾಲ್ ಹಾಕಿದರು.
ಕಾವೇರಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿ, ಕಾವೇರಿ ಮಾನಿಟರಿಂಗ್ ಬೋರ್ಡ್ ಪ್ರಾಧಿಕಾರ ರಚನೆ ಮಾಡಿದ್ದು ಮೋದಿ, ಎಲ್ಲಾ ರಾಜ್ಯದ ಇಂಜಿನಿಯರ್ ಅಲ್ಲಿ ಇರುತ್ತಾರೆ, ಅಲ್ಲಿ ನಿರ್ಧಾರ ಮಾಡುವವರು ನೀವೇ, ನೀರು ಕೊಡಿ ಅಂತಾ ಹೇಳಿದವರು ನೀವೆ, ನೀರು ಇದ್ದರೆ ತಾನೇ ಕೊಡುವುದು ? ಇಲ್ಲದಿರುವುದು ಹೇಗೆ ? ಎಂದು ಹೇಳಿದರು.
ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ. ಈಗ ಇಲ್ಲಿ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ? ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರ ಕೆಲಸ ಮೆಚ್ಚಬೇಕು, ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ, ಇದರ ಜೊತೆಗೆ ಕೃಷಿಗೂ ನೀರು ಬೇಕು. ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ ಈಗ ಅನುಕೂಲವಾಗುತ್ತಿತ್ತು, 25 ಸಂಸದರು ಮಾಡಬೇಕಿತ್ತು ಎಲ್ಲಿ ಹೋಗಿದ್ದಾರೆ ? ಇಂಡಿಯಾ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ, ಅದಕ್ಕಾಗಿ ಒಂದೇ ದೇಶ ಒಂದೇ ಚುನಾವಣೆ ಅನ್ನುತ್ತಿದ್ದೀರಾ? ನೀರು ಬಿಡುವ ಕೀಲಿ ದೆಹಲಿಯಲ್ಲಿದೆ, ಅಲ್ಲಿ ಕುಳಿತುಕೊಂಡು ಬಟನ್ ಒತ್ತಿದರೆ ಸಾಕು ನೀರು ಹೋಗುತ್ತದೆ, ನೀರು ಬಿಡುವುದು ಕೇಂದ್ರ ಸರ್ಕಾರದ ಕೈನಲ್ಲಿ ಇದೆ ಎಂದರು.
ಕುಮಾರಸ್ವಾಮಿ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಆರೋಗ್ಯ ಬೇಗ ಗುಣಮುಖವಾಗಲಿ, ಚಾಮುಂಡೇಶ್ವರಿ ಅಲ್ಲಿ ನಾವು ಪ್ರಾರ್ಥನೆ ಮಾಡುತ್ತೇವೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ನಮ್ಮ ನಾಯಕರು ಆರೋಗ್ಯ ವಿಚಾರಿಸಿದ್ದಾರೆ, ರಾಜಕೀಯ ಬೇರೆ ಮಾನವೀಯತೆ ಬೇರೆ, ಒಂದು ತಿಂಗಳು ವಿಶ್ರಾಂತಿ ಪಡೆಯಿರಿ.ರಾಜಕಾರಣ ಮಾಡುವುದು ಇದ್ದೇ ಇರುತ್ತದೆ. ಸಂಪೂರ್ಣ ವಿಶ್ರಾಂತಿ ಪಡೆದು ಗುಣಮುಖರಾಗಿ ಬನ್ನಿ ಎಂದು ಹಾರೈಸಿದರು.
ಕೌನ್ಸಿಲ್ ಸಭೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೈಯಲ್ಲಿ ಆಗದವರು ಮೈ ಪರಚಿಕೊಂಡರು ಅನ್ನುವಂತಿದೆ, 15 ದಿನದ ಹಿಂದೆಯೇ ನಗರಾಭಿವೃದ್ಧಿ ಸಚಿವರ ಸಭೆ ನಿಗದಿಯಾಗಿತ್ತು. ಅಂದೇ ಏಕೆ ಕೌನ್ಸಿಲ್ ಸಭೆ ಇಟ್ಟುಕೊಂಡಿದ್ದಾರೆ. ಸಂಸದ ಪ್ರತಾಪಸಿಂಹ ಮೈ ಪರಚಿಕೊಂಡು ಯಾಕೆ ಗಾಯ ಮಾಡಿಕೊಳ್ಳುವುದು ಬೇಡ. ಇನ್ನು ನಾಲ್ಕು ತಿಂಗಳು ಇರಿ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.