ಬೆಳಗಾವಿ: ಜಿಲ್ಲೆಯ ರಾಜಹಂಸಗಡ ಕೋಟೆಯಲ್ಲಿರುವ ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಉದ್ಘಾಟನೆ ಮಾಡಲು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ಲಾನ್ ಮಾಡಿದ್ದಾರೆ.
ಮಾರ್ಚ್ 5ರಂದು ದಿನಾಂಕ ನಿಗದಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರನ್ನ ಕರೆತಂದು ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್ ಪ್ಲ್ಯಾನ್ ಮಾಡಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಶಿವಾಜಿ ಮೂರ್ತಿ ಉದ್ಘಾಟನೆ ಕ್ರೆಡಿಟ್ಗಾಗಿ ಹೆಬ್ಬಾಳ್ಕರ್ ಹಾಗೂ ರಮೇಶ್ ನಡುವೆ ಫೈಟ್ ನಡೆದಿದ್ದು ರಮೇಶ್ಗೆ ತಿರುಗೇಟು ನೀಡಲು ಮಾ.5ರಂದು ಮತ್ತೊಮ್ಮೆ ಉದ್ಘಾಟನೆ ಮಾಡಲಿದ್ದಾರೆ.
ಮಾ. 2ರಂದು ಸಿಎಂ ಬಸವರಾಜ ಬೊಮ್ಮಾಯಿ ರಿಬ್ಬನ್ ಕಟ್ ಮಾಡುವ ಮೂಲಕ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಗ್ರಾಮೀಣ ಕ್ಷೇತ್ರದಲ್ಲಿ ಜಿದ್ದಿಗೆ ಬಿದ್ದು ಅತೀ ಹೆಚ್ಚು ಮತದಾರರಿರುವ ಮರಾಠಿಗರನ್ನ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ.
ರಮೇಶ್ ಯಾವುದೇ ಕಾರಣಕ್ಕೂ ಇದನ್ನು ಕಾಂಗ್ರೆಸ್ ಕಾರ್ಯಕ್ರಮ ಆಗಲು ಬಿಡುವುದಿಲ್ಲಎಂದು ಹೇಳಿದ್ದರು ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿಶಿವಾಜಿ ಮೂರ್ತಿಯನ್ನ ಲೋಕಾರ್ಪಣೆ ಮಾಡಿದ್ದರು.