ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರ ಜೀವಾನಾಧಾರಿತ ಲೀಡರ್ ರಾಮಯ್ಯ ಹೆಸರಿನಲ್ಲಿ ಸಿನೆಮಾ ಮಾಡಲು ಮುಂದಾಗಿದ್ದಾರೆ.ವಿಜಯ ಸೇತುಪತಿ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನ ಸತ್ಯರತ್ನ ನಿರ್ದೇಶಿಸಲಿದ್ದಾರೆ.
ಜೊತೆಗೆ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಲೀಡರ್ ರಾಮಯ್ಯ ಸಿನಿಮಾವು ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಸಿದ್ದರಾಮಯ್ಯ ಅಭಿಮಾನಿ ಸಂಘದಿಂದ ಸಿನಿಮಾದ ಮೊದಲ ಪೋಸ್ಟರ್ನ್ನು ಸಿದ್ದರಾಮಯ್ಯ ನಿವಾಸದಲ್ಲಿ ಬಿಡುಗಡೆ ಮಾಡಲಾಗಿದೆ. ಸಿನಿಮಾ ಕುರಿತು ಸಿದ್ದರಾಮಯ್ಯನವರ ನಿವಾಸದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಸಿದ್ದರಾಮಯ್ಯನವರು ಚುನಾವಣಾ ಸಮಯದಲ್ಲಿ ಇವೆಲ್ಲಾ ಬೇಕಾ ಎಂದು ಪ್ರಶ್ನೆ ಮಾಡಿದ್ದರು.
ಸುಮ್ಮನೆ 20 ಕೋಟಿ ಯಾಕೆ ಹಾಳು ಮಾಡುತ್ತೀರಿ? ಸಿನಿಮಾ ಬೇಡವೆಂದು ಹೇಳಿದ್ದರಂತೆ. ಸಿದ್ದರಾಮಯ್ಯರವರ ಬಾಲ್ಯ, ಶಿಕ್ಷಣ , ರಾಜಕೀಯಜೀವನ ಎಲ್ಲವನ್ನು ಈ ಸಿನೆಮಾದಲ್ಲಿ ತೋರಿಸಲಾಗಿದ್ದು, ಬರೊಬ್ಬರಿ 20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲು ತಯಾರಿ ನಡೆದಿದೆ.
ಅಂದಹಾಗೆ ಮತ್ತೊಮ್ಮೆ ಸಿದ್ದರಾಮಯ್ಯ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಸಿದ್ದರಾಮಯ್ಯನವರ ಜೀವನಾಧಾರಿತವಾದ #Leaderರಾಮಯ್ಯ ಎಂಬ ಒಂದು ಬಯೋ ಚಿತ್ರ 5 ಭಾಷೆಗಳಲ್ಲಿ (ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ) ನಿರ್ಮಾಣವಾಗುತ್ತಿದ್ದು, ವಿಜಯ್ ಸೇತುಪತಿ ನಾಯಕ ನಟನಾಗಿ ನಟಿಸುತ್ತಿದ್ದು, ಈ ಚಿತ್ರವು ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ.