ಬೆಂಗಳೂರು: ಬಿಜೆಪಿ ಸ್ನೇಹಿತರು ಡೆಲ್ಲಿಗೆ ತೆರಳಿ ಮೇಕೆದಾಟು ತರುವಂತೆ ಒತ್ತಡ ಹಾಕಲಿ, ಬಿಜೆಪಿ ಸ್ನೇಹಿತರು ಕೇವಲ ಕಾವೇರಿ ವಿಚಾರಕ್ಕಾಗಿ ಹೋರಾಟ ಮಾಡೋದಲ್ಲ, ಮೇಕೆದಾಟು ಯೋಜನೆ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹೇರಲಿ. ಆಗ ಬಿಜೆಪಿ ಹೋರಾಟಕ್ಕೆ ನಿಜವಾದ ಫಲ ಸಿಗುತ್ತೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡಿದ ಮೇಲೆ ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಟ್ಟಿದ್ದರು. ಇವರು ಯಾಕೆ ಕ್ಲಿಯರೆನ್ಸ್ ಕೊಡಿಸಲಿಲ್ಲ, ಬಿಜೆಪಿ ಅವರು ಮೊದಲು ಆ ಕೆಲಸ ಮಾಡಲಿ ಎಂದಿದ್ದಾರೆ.
ಕಾವೇರಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಕೇಸ್ ಮುಂದೆ ಹಾಕಿದಷ್ಟು ಸಮಸ್ಯೆ ಹೆಚ್ಚಾಗಲಿದೆ. ಕಷ್ಟ ಪಟ್ಟಾದರೂ ನೀರು ಉಳಿಸಿಕೊಳ್ಳಬೇಕಿದೆ. ಸುಪ್ರೀಂಕೋರ್ಟ್ ಆದೇಶದ ಮೇಲೆ ನಾವೇನು ಮಾಡಲು ಬರಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈದ್ಗಾ ಮೈದಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ: ಪ್ರಲ್ಹಾದ್ ಜೋಷಿ
ಬಿಜೆಪಿ ನಾಯಕರ ಭೇಟಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಅದನೆಲ್ಲಾ ನಾನು ಹೇಳಲು ಆಗಲ್ಲ, ಅವರವರ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಸ್ನೇಹಿತರು ಅಂದ ಮೇಲೆ ಭೇಟಿಗೆ ಬರುತ್ತಾರೆ, ಬರಬೇಡಿ ಎನ್ನಲು ಆಗಲ್ಲ. ನಾವು ರಾಜಕೀಯದವರು ವಿವಿಧ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ವಿ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.