ಬೆಂಗಳೂರು: ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸೋದೇ ನಮ್ಮೆಲ್ಲರ ಆಶಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ,ಇದು ನನ್ನ ವೈಯಕ್ತಿಕ ಅಭಿಪ್ರಾಯ ಕೂಡ ಆಗಿದ್ದು, ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದರ ಪ್ರಕಾರ ಹೋಗಬೇಕಾಗುತ್ತದೆ. ಇದೆಲ್ಲ ಊಹಾಪೋಹಾಗಳು, ಇನ್ನೂ ಅಧಿಕೃತವಾಗಿ ಯಾವುದೇ ಪಟ್ಟಿ ಬಿಡುಗಡೆ ಆಗಿಲ್ಲ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಚಾಮುಂಡಿ, ವರುಣ, ಬಾದಾಮಿ, ಕೋಲಾರ… ಹೀಗೆ ಕ್ಷೇತ್ರದಿಂದ ಕ್ಷೇತ್ರ ಬದಲಾವಣೆ ಮಾಡುತ್ತಲೇ ಇದ್ದಾರೆ. ನಿಮಗೆ ಕೋಲಾರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಅಂತ ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಅಂತ ತಿಳಿದು ಬಂದಿದೆ. ಪಕ್ಷದ ನಾಯಕರ ಜೊತೆಗೆ ಹೋಗಿ ಚರ್ಚೆ ಮಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.