ಚಾಮರಾಜನಗರ: ಪುಟಗೋಸಿ 5 ಲಕ್ಷಕ್ಕೆ ಯಾರು ಆತ್ಮಹತ್ಯೆ ಮಾಡಿಕೊಳ್ತಾರೆ, ಬೇಕಿದ್ದರೆ ಶಿವಾನಂದ್ ಪಾಟೀಲ್‌ಗೆ ನಾವೇ 50 ಕೋಟಿ ಕೊಡ್ತೀವಿ ನೀನೇ ಆತ್ಮ ಹತ್ಯೆ ಮಾಡಿಕೋ ಎಂದು ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಾಗ್ಯರಾಜು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದ ಸಚಿವರು ಅವಿವೇಕಿತನದ ಮಾತನ್ನಾಡಿದ್ದಾರೆ, 50 ಕೋಟಿ ರೂಪಾಯಿ ಕೊಡ್ತಿವಿ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಆಫರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ‘ಭಾರತ್ ಅಥವಾ ಇಂಡಿಯಾ’: 2016 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
ರಾಜ್ಯದಲ್ಲಿ 950 ಕೋಟಿ ರೂ. ಕಬ್ಬಿನ ಬಾಕಿ ಬಿಲ್ ಕೊಡಬೇಕಿದೆ, ಬಾಕಿ ಕೊಡೋ ಯೋಗ್ಯತೆ ಅವನಿಗಿಲ್ಲ, ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುತ್ತಾನೆ, ರೈತರೆಲ್ಲರು ಭಿಕ್ಷೆ ಬೇಡಿ 50 ಕೋಟಿ ರೂಪಾಯಿ ಕೊಡ್ತೇವೆ ಆತ್ಮಹತ್ಯೆ ಮಾಡಿಕೊಳ್ತೀರಾ? ಎಂದು ಪ್ರಶ್ನಿಸಿದ್ದಾರೆ,
ರಾಜಕೀಯದಲ್ಲಿ ಇದುವರೆಗೆ ಒಬ್ಬ ಸಚಿವರಾಗಲಿ, ಕಬ್ಬಿನ ಕಾರ್ಖಾನೆ ಮಾಲೀಕರಾಗಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ವರ್ಷ ವರ್ಷ ನಿಮ್ಮ ಆದಾಯ ದ್ವಿಗುಣ ಆಗ್ತಿದೆ, ಆದರೆ ರೈತರ ಆದಾಯ ದ್ವಿಗುಣ ಆಗುತ್ತಾ.. ? ರೈತರಿಗೆ ಏನು ಕೊಡ್ತಿರಿ ? ನೀವು ಅಧಿಕಾರಕ್ಕೆ ಬರೋವಾಗ ಸಲ್ಲಿಸುವ ಅಫಡವಿಟ್ ಒಂದು, ಆದ್ರೆ ವರ್ಷ ವರ್ಷ ನಿಮ್ಮ ಆದಾಯ ಮಾತ್ರ ದ್ವಿಗುಣ ಆಗುತ್ತದೆ, ನೀವು ರೈತರಿಗೆ ಕೊಡುವ ಮೂಲ ಸೌಕರ್ಯ ಏನು.. ? ಎಂದು ಕಿಡಿಕಾರಿದ್ದಾರೆ.
ರೈತರ ಕಣ್ಣು, ಬೆನ್ನು, ತಲೆಗೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದೀರಾ, ಈಗಲೇ ಸಚಿವ ಶಿವಾನಂದ ಪಾಟೀಲ್ ರೈತರ ಕ್ಷಮೆ ಕೇಳ್ಬೇಕು, ಇಲ್ಲವಾದರೆ ಚಾಮರಾಜನಗರಕ್ಕೆ ಬಂದಾಗ ನಾವೇ 50 ಕೋಟಿ ಕೊಡ್ತಿವಿ, ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ, ಈ ಬಗ್ಗೆ ನಾವು ಅಭಿಯಾನ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.