ಕೊಪ್ಪಳ : ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅದು ಮೈತ್ರಿ ಅಲ್ಲ ಅದು ಅಪಮೈತ್ರಿ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯ ಮಾಡಿದ್ದಾರೆ.
ಜಿಲ್ಲೆಯ ಕುಷ್ಟಗಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ತಂಗಡಗಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಯಾವುದೇ ಅರ್ಥ ಇಲ್ಲ, ಜ್ಯಾತ್ಯಾತೀತ ಜನತಾದಳ ತೆಗೆದು ಆ ಪಕ್ಷವನ್ನು ಕೋಮುವಾದಿ ಜನತಾದಳ ಪಕ್ಷ ಅಂತ ಮಾಡಬೇಕು. ಕೋಮುವಾದಿಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಇವರು, ಅವರ ಜೊತೆ ಸೇರಿಕೊಂಡು ಜ್ಯಾತ್ಯಾತೀತ ಹೇಳಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Central Govt : ಕಚೇರಿಯ ಹಳೆ ವಸ್ತುಗಳಿಂದ ₹600 ಕೋಟಿ ಗಳಿಸಿದ ಮೋದಿ ಸರ್ಕಾರ
ಸಿದ್ದರಾಮಯ್ಯ ಮೊದಲು ಬಿಜೆಪಿ ಸೇರಿಕೊಳ್ಳಲು ಅಡ್ವಾಣಿಯವರನ್ನ ಭೇಟಿ ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದ ಬಗ್ಗೆ ಮಾತನಾಡಿದ ಅವರು, ನಮ್ಮದು ಜ್ಯಾತ್ಯಾತೀತ ಪಕ್ಷ. ನಮ್ಮ ಜೊತೆ ಯಾರೇ ಸೇರಿಕೊಂಡರು ತಪ್ಪೇನಿಲ್ಲ. ಎಲ್ಲಾ ಅತೃಪ್ತ ಆತ್ಮಗಳು ಬಿಜೆಪಿಯಲ್ಲೆ ಇದಾವೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ನಮಗೆ ಯಾವ ತೊಂದರೆಯು ಇಲ್ಲ. ಕಾಂಗ್ರೆಸ್ ನಲ್ಲಿ 136 ಸೀಟ್ ಗಳಿವೆ,ನಮ್ಮ ಸಕಾ೯ರ ಬಂಡೆಯಂತೆ ಗಟ್ಟಿ ನಿಂತಿದೆ. ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ: ಅಂಗಿ ಮೇಲೆ ಕಮಲದ ಚಿತ್ರ, ಖಾಕಿ ಪ್ಯಾಂಟ್!
ಬಿಜೆಪಿ ಪಕ್ಷದವರನ್ನು ಭೇಟಿಯಾಗುತ್ತಿರುವ ತಂಗಡಗಿ, ಈ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ ಅವರು, ನಾನು ಬಿಜೆಪಿ ನಾಯಕರನ್ನ ಭೇಟಿಯಾಗುತ್ತೇನೆ. ಏಕೆಂದರೆ ರಾಜಕೀಯನೆ ಬೇರೆ, ಗೆಳೆತನನೇ ಬೇರೆ. ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದು ಸ್ವತಃ ಸಿದ್ರಾಮಯ್ಯನವರೆ ಹೇಳಿರುವಾಗ, ಇದಕ್ಕಿಂತ ಉತ್ತರ ಬೇಕಾ? ಎಂದು ಕೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.