Friday, September 29, 2023
spot_img
- Advertisement -spot_img

ಲಿಂಗಾಯತ ಎಂಬುದು ಜಾತಿಯಲ್ಲ, ಅದೊಂದು ಧರ್ಮ : ಗುರುಬಸವ ಸ್ವಾಮೀಜಿ

ದಾವಣಗೆರೆ : ಲಿಂಗಾಯತ ಎಂಬುದು ಜಾತಿಯಲ್ಲ, ಅದೊಂದು ಧರ್ಮ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಲೇ ಬೇಕು, ಅದಕ್ಕಾಗಿ ನಮ್ಮ‌ ಸಂಘರ್ಷ ನಿರಂತರವಾಗಿ ಇರುತ್ತದೆ ಎಂದರು.

ಇದನ್ನೂ ಓದಿ : Central Govt : ಕಚೇರಿಯ ಹಳೆ ವಸ್ತುಗಳಿಂದ ₹600 ಕೋಟಿ ಗಳಿಸಿದ ಮೋದಿ ಸರ್ಕಾರ

ಲಿಂಗಾಯತ ಎಂಬುದು ಒಂದು ಜಾತಿಯಾಗಿ ಉಳಿಯಬಾರದು. ಸಿಖ್ , ಜೈನರಂತೆ ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಬೇಕು , ಎಲ್ಲರಿಗೂ ಸಮ ಬಾಳು ಸಮ ಪಾಲು ಎಂಬ ಕಾಯಕ ಸಿದ್ದಾಂತದ ಮೇಲೆ ಬಸಣ್ಣ ಲಿಂಗಾಯತ ಧರ್ಮವನ್ನು ಹುಟ್ಟುಹಾಕಿದರು ಎಂದು ತಿಳಿಸಿದರು.

ಈಗ ರಾಜ್ಯದಲ್ಲಿ ಸಮ ಬಾಳು ಸಮ ಪಾಲ ಎಂಬ ಸಿದ್ಧಂತಾದ ಸರ್ಕಾರ ಇದೆ, ಓಬಿಸಿ ಮೀಸಲಾತಿ ಬೇಕು, ಇದೇ ಕಾರಣಕ್ಕೆ ಎಸ್ಸಿ ಎಸ್ಟಿ ಸೇರಿದಂತೆ ಹಲವಾರು ಮೀಸಲಾತಿಗಳು ಇವೆ, ಅದೇ ರೀತಿಯಲ್ಲಿ ‌ಎಲ್ಲ ಲಿಂಗಾಯತ ಒಳ ಪಂಗಡಗಳು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕು, ಈಗ ಎಲ್ಲ ಲಿಂಗಾಯತ ಒಳ ಪಂಗಡಗಳು ಸಹ ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕು, ಇದು ನಮ್ಮ ಆಗ್ರಹವಾಗಿದೆ ಎಂದು ಸರ್ಕಾರದ ಮುಂದೆ ತಮ್ಮ ಬೇಡಿಕೆಯಿಟ್ಟಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles