ಸ್ಥಳಿಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿಶ್ಲೇಷಣೆ ಮಾಡಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ಚುನಾವಣೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಇಂದೆ ನಿರ್ಧಾರ ಕೈಗೋಳ್ಳಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಪ್ರೀಂ ಆದೇಶವನ್ನ ಸಂಪೂರ್ಣವಾಗಿ ಅಧ್ಯಯನ ಮಾಡುವಂತೆ ರಾಜ್ಯದ ಅಡ್ವೋಕೆಟ್ ಜನರಲ್ ಅವರಿಗೆ ಸೂಚನೆ ನೀಡಿದಲಾಗಿದೆ. ಇಂದು ಕಾನೂನು ತಜ್ಞರು ಹಾಗೂ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಸಂಜೆಯೋಳಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ರಾಜಕೀಯ ಮಿಸಲಾತಿ ಕುರಿತು ಈಗಾಗಲೇ ಒಂದು ತಜ್ಞರ ಸಮಿತಿ ರಚಿಸಲಾಗಿದೆ. ಈ ವಿಚಾರವನ್ನ ನಾವು ಸುಪ್ರೀಂ ಕೋರ್ಟ್‌ಗು ಸಹ ತಿಳಿಸಿದ್ದೇವೆ. ಆದರೆ ಮೊನ್ನೆ ಬಂದಿರುವ ಆದೇಶದ ಅನ್ವಯ ನಾವು ಮುಂದೆ ಯಾವ ಹೆಜ್ಜೆ ಇಡಬೇಕು ಎಂಬುದನ್ನ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸಹ ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ.
ನಮ್ಮ ಸರ್ಕಾರ ಈವರೆಗು ಸಂವಿಧಾನದ ಕಾನೂನಿನ ಅನ್ವಯವೇ ಮೀಸಲಾತಿಗಳನ್ನ ಘೋಷಣೆ ಮಾಡಿಕೊಂಡು ಬಂದಿದೆ. ಓಬಿಸಿಯವರಿಗೆ ವಿಶೇಷ ರಾಜಕೀಯ ಮಿಸಲಾತಿ ನೀಡುವ ಬಗ್ಗೆ ಕಮಿಟಿ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಸದ್ಯಕ್ಕಂತು ಓಬಿಸಿ ಮಿಸಲಾತಿ ಇಟ್ಟುಕೊಂಡೆ ಚುನಾವಣೆ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಇಂದು ಸಚಿವ ಸಂಪುಟ ಸಭೆ.
ಮೂರು ದಿನಗಳ ದೆಹಲಿ ಪ್ರವಾಸ ಮುಗಿಸಿ ವಾಪಸ್ಸಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದ್ದು. ಸಚಿವರನ್ನ ಕೈ ಬಿಡುವ ಹಾಗೂ ನೂತನ ಸಚಿವರಿಗೆ ಅವಕಾಶ ನೀಡುವ ವಿಚಾರವು ಚರ್ಚೆಯಾಗುವ ಸಾಧ್ಯತೆ ಇದೆ. ಕೆಲ ಸಚಿವರಿಗೆ ಇಂದು ನಡೆಯುವ ಸಚಿವ ಸಂಪುಟ ಸಭೆಯೇ ಕೊನೆಯ ಸಭೆಯಾಗುವ ಸಾಧ್ಯತೆ ಇದ್ದು, ಮುಂದಿನ ಸಚಿವ ಸಂಪುಟ ಸಭೆ ನಡೆಯುವ ಹೊತ್ತಿಗೆ ಹಲವು ಸಚಿವರು ಸಂಪುಟದಿಂದ ಔಟ್ ಆಗಿ ಹೊಸ ಮುಖಗಳು ಇನ್ ಆಗಲಿದ್ದಾರೆ