Sunday, September 24, 2023
spot_img
- Advertisement -spot_img

ಬಿಜೆಪಿಯಿಂದ 20 ಜನ ಬರ್ತಾರೆ, ಅವರಿಂದ ಲೋಕ ಚುನಾವಣೆ ಮಾಡ್ತೀವಿ : ರಾಜು ಕಾಗೆ

ಬೆಳಗಾವಿ : ಬಿಜೆಪಿಯ 20 ಜನ ಶಾಸಕರು ಕಾಂಗ್ರೆಸ್ಗೆ ಬರ್ತಾರೆ ಅವರನ್ನು ತೆಗೆದುಕೊಂಡು ನಾವು ಪಾರ್ಲಿಮೆಂಟ್ ಚುನಾವಣೆ ಮಾಡ್ತಿವಿ ಎಂದು ಶಾಸಕ ರಾಜು ಕಾಗೆ ಅವರು ರಮೇಶ ಜಾರಕಿಹೋಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ನಿನ್ನ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ; ಪರಮೇಶ್ವರ್ ವಿರುದ್ಧ ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ!

ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಅವರಿಗೆ ಮಾಡೋದಕ್ಕೆ ಕೆಲಸ ಇಲ್ಲ. ನಮ್ಮಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಮಧ್ಯ ಯಾವುದೇ ಒಳಜಗಳವಿಲ್ಲ, ಯಾವ ಲೋಪದೋಷವು ನಮ್ಮಲಿಲ್ಲಾ ನಾವೆಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿದ್ದೇವೆ. ಈ ಐದು ವರ್ಷ ಒಳ್ಳೆಯ ಆಡಳಿತ ಕೊಡಲಿದ್ದೇವೆ, ಇನ್ನು 15 ರಿಂದ 20 ವರ್ಷಗಳ ಕಾಲ ನಾವೇ ಆಡಳಿತ ಮಾಡಲಿದ್ದೇವೆ. ನಾವೆಲ್ಲ ಶಾಸಕರು ಸೇರಿಕೊಂಡು ರಾಜ್ಯದಲ್ಲಿ ಒಳ್ಳೆಯ ಆಡಳಿತ ಮಾಡ್ತಿವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ಪಡೆ ಮುಖ್ಯಸ್ಥ ನಿಧನ

ಚಿಕ್ಕೋಡಿ ಜಿಲ್ಲೆಯ ಅಥಣಿಯಲ್ಲಿ ನಡೆದ  ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜಾರಕಿಹೋಳಿ  ಅವರು, ‘ಆಪರೇಷನ್ ಹಸ್ತ ಮಾಡುವವರು, ಹಾಗೂ ಈ ಆಪರೇಷನ್ ಗೆ ಒಳಗಾಗುವವರು ಮೂರ್ಖರು’. ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡಿದಾಗ ಅದಕ್ಕೊಂದು ಅರ್ಥವಿತ್ತು. ಸರ್ಕಾರ ರಚನೆಗೆ ಈ ಆಪರೇಷನ್ ಮಾಡಲೇ ಬೇಕಿತ್ತು. ಆದ್ರೆ ಕಾಂಗ್ರೆಸ್ ಅಗತ್ಯವಿಲ್ಲದೆ ಈ ಕೆಲಸ ಮಾಡುತ್ತಿದೆ. ಬಿಜೆಪಿ ನಮ್ಮನ್ನು ಕರೆದಿಲ್ಲ.ಕಾಂಗ್ರೆಸ್ ಶಾಸಕರಲ್ಲಿಯೇ ಭಿನ್ನಾಭಿಪ್ರಾಯವಿದೆ. ಕಾಂಗ್ರೆಸ್ ನಿಂದ ಬೇಸತ್ತು ನಾನೆ ಬಿಜೆಪಿ ಸೇರಿಕೊಂಡೆ ಎಂದು ಹೇಳಿದ್ದರು. 

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles