ತುಮಕೂರು: ರಾಜ್ಯದ ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಕೆನೆಭರಿತ ಹಾಲು ವಿತರಿಸಲು 2013ರಲ್ಲಿ ಸರ್ಕಾರ ಜಾರಿಗೊಳಿಸಿದ್ದ ಕ್ಷೀರಭಾಗ್ಯ ಯೋಜನೆ ಇಂದಿಗೆ ದಶಕ ಪೂರೈಸಿದ್ದು, ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
2013 ರ ಆಗಸ್ಟ್ 1 ರಂದು ನಮ್ಮ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿತ್ತು, ಈ ಯೋಜನೆಯು ಮಂಗಳವಾರಕ್ಕೆ ಹತ್ತು ವರ್ಷ ಪೂರೈಸಿದೆ, ವಿಶ್ವ ಡೇರಿ ಫೌಂಡೇಶನ್ ನೀಡಲಾಗುವ ಅಂತರರಾಷ್ಟ್ರಿಯ ಅತ್ಯುತ್ತಮ ಯೋಜನೆ ಪ್ರಶಸ್ತಿ ಈ ಯೋಜನೆಯ ಭಾಜನವಾಗಿದೆ ಎಂದು ಹೇಳಿದರು.
ಇಂದು ಕ್ಷೀರಭಾಗ್ಯಕ್ಕೆ ದಶಮಾನೋತ್ಸವದ ಸಂಭ್ರಮ. ಕೆನೆಭರಿತ ಹಾಲು ವಿತರಿಸುವ ಮೂಲಕ ಕಲಿಕೆಯ ಜೊತೆಗೆ ಶಾಲೆಗಳನ್ನು ಪೋಷಣೆಯ ಕೇಂದ್ರಗಳಾಗಿಸಿದ್ದು ನಮ್ಮ ಕ್ಷೀರಭಾಗ್ಯ ಯೋಜನೆ. ಹಲವು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾದದ್ದು ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮಧುಗಿರಿಗೆ ಜಿಲ್ಲಾ ಕೇಂದ್ರದ ಭಾಗ್ಯ: ರಾಜಣ್ಣನ ಮತ್ತೊಂದು ಕೂಗು ಏನಂದ್ರೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಅನ್ನೋದು ಎಂದರು. ರಾಜಣ್ಣ ಹೇಳ್ತಾರೆ ಜಿಲ್ಲಾ ಕೇಂದ್ರ ಮಾಡಲು ಯಾರ ವಿರೋಧ ಇಲ್ಲ ಅಂತ, ಮಾಡಿದ್ರೆ ನಿಮ್ಮ ಜಿಲ್ಲೆಯಲ್ಲೇ ವಿರೋಧ ಎದ್ದೇಳುತ್ತೆ ಎಂದು ಹೇಳಿದರು.
ಮಧುಗಿರಿಯನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಪರಿಶೀಲನೆ ಮಾಡುತ್ತೆ, ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಮಾಡೇ ಮಾಡ್ತೇವೆ, ಕೊಟ್ಟ ಮಾತಿನಂತೆ ನಾವು ನಡೆದುಕೊಳ್ತೇವೆ, ಕಳೆದ ಬಾರಿ ಚುನಾವಣಾ ಸಮಯದಲ್ಲಿ ನಾನು ಮಾತು ಕೊಟ್ಟಿದ್ದೆ, ರಾಜಣ್ಣನನ್ನ ಕಳೆದುಕೊಂಡರೇ ನೀವು ಅಭಿವೃದ್ಧಿ ಕಳೆದುಕೊಂಡಂತೆ ಅಂತ ಹೇಳಿದ್ದೆ.ಅದೇ ರೀತಿ ಇವತ್ತು ಕೇವಲ ಮೂರೇ ತಿಂಗಳಲ್ಲಿ ಮಧುಗಿರಿ ತಾಲೂಕಿಗೆ 150 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
25 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನವನ್ನ ಇವತ್ತು ಉದ್ಘಾಟನೆ ಮಾಡಿದ್ದೇವೆ, ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ, ಸುಳ್ಳು ಹೇಳುವ ಸರ್ಕಾರ ಅಲ್ಲ, ಮಾತು ಕೊಟ್ಟಿದ್ದೇವೆ ಮಾತು ಉಳಿಸಿಕೊಂಡಿದ್ದೇವೆ. ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲ
ಕೊಟ್ಟ ಮಾತಿನಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.