ಬಳ್ಳಾರಿ: ಜಿಲ್ಲೆಯ ಬಿಜೆಪಿ ಸಂಸದ ವೈ.ದೇವೇಂದ್ರಪ್ಪನ ಮಗ ವೈ.ಡಿ.ರಂಗನಾಥ್ ಅವರು ಪ್ರೀತಿ ಹೆಸರಲ್ಲಿ ವಂಚನೆ ಮಾಡಿರುವುದಾಗಿ, ಯುವತಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೈ.ಡಿ.ರಂಗನಾಥ್ ಅವರೂ ಪ್ರತಿ ದೂರು ನೀಡಿದ್ದಾರೆ.
ಸಂಸದರ ಪುತ್ರ ರಂಗನಾಥ್ ಮೈಸೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿ ಸೇವೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಾರ್ಟಿ ಒಂದರಲ್ಲಿ ಸ್ನೇಹಿತರ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದರು. ಬಳಿಕ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ ಯುವತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಂಬಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರಿದ್ದರು. ಇದೀಗ ರಂಗನಾಥ್ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ವಂಚನೆ ಆರೋಪ; ಸಂಸದ ದೇವೇಂದ್ರಪ್ಪ ಮಗನ ವಿರುದ್ದ ಎಫ್ಐಆರ್ ದಾಖಲು
ರಂಗನಾಥ್ ಸಲ್ಲಿಸಿರುವ ದೂರಿನಲ್ಲಿ, ಶ್ರೀನಿವಾಸ್ ಎಂಬುವರ ಮೂಲಕ ನನಗೆ ಯುವತಿಯ ಪರಿಚಯ ಆಗಿತ್ತು. ಆದರೆ ಯುವತಿ ನನಗೆ ಬೆದರಿಸಿ ಹಣ ಕೇಳಿದ್ದಾರೆ. ನಾನು ಭಯದಿಂದ ₹32,500 ಕೊಟ್ಟಿದ್ದೇನೆ. ಯುವತಿ ಸ್ನೇಹಿತ ನನ್ನಿಂದ 15 ಲಕ್ಷ ರೂಪಾಯಿ ಹಣ ಕೇಳಿದ್ದಾನೆ. ಕನಿಷ್ಠ 10 ಲಕ್ಷ ರೂ. ನೀಡುವಂತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟರೆ ಯುವತಿ ನಿನ್ನ ಸಹವಾಸಕ್ಕೆ ಬರಲ್ಲ ಎಂದಿದ್ದರು. ಹಣ ಕೊಡಬೇಕೆಂದು ಜೀವ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ಇದಲ್ಲದೆ ಜಾತಿ ನಿಂದನೆ ಕೂಡ ಮಾಡಿದ್ದಾರೆ ಎಂದು ರಂಗನಾಥ್ ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ನಗರಗಳಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ!
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.