ಮಂಡ್ಯ: ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನ್ನುವುದು ಕಿತ್ಕೊಂಡು ಹೋಯ್ತು, ಸ್ವಾಭಿಮಾನ, ಅನುಕಂಪದ ಮುಂದೆ ಯಾವ ದುಡ್ಡು, ಅಧಿಕಾರ ನಡೆಯಲ್ಲ ಎಂದು ಜೆಡಿಎಸ್ ನಾಯಕರ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಕಿಡಿಕಾರಿದರು.
ಕೊಪ್ಪದಲ್ಲಿ ಸ್ವಾಭಿಮಾನಿ ಪರ್ವ ಸಮಾವೇಶದಲ್ಲಿ ಮಾತನಾಡಿ, ಸ್ವಾಭಿಮಾನ, ಅನುಕಂಪದ ಮುಂದೆ ಯಾವ ದುಡ್ಡು, ಅಧಿಕಾರ ನಡೆಯಲ್ಲ ಎಂದು ಸುಮಲತಾ ಅಂಬರೀಶ್ ಅವರನ್ನು ಉದಾಹರಣೆ ಕೊಟ್ಟು ಜೆಡಿಎಸ್ ನಾಯಕರಿಗೆ ತಿವಿದಿದ್ದಾರೆ. ಜೆಡಿಎಸ್ನಿಂದ ಉಚ್ಛಾಟನೆಗೊಂಡಿರುವ ಎಲ್.ಆರ್ ಶಿವರಾಮೇಗೌಡ ಸ್ವಾಭಿಮಾನಿಯಾಗಿ ನಾಗಮಂಗಲ ಕ್ಷೇತ್ರದ ಜನರ ಮತ ಕೇಳುತ್ತಿದ್ದಾರೆ. ನಂತರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಸುಮಲಾತಾ ಅಂಬರೀಶ್ ಅವರ ಮಾದರಿಯಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಮತ ಬೇಟೆಗೆ ಮುಂದಾಗಿದ್ದಾರೆ. ಸಂಸತ್ ಚುನಾವಣೆಯಲ್ಲಿ ಜೆಡಿಎಸ್‌ನ ದಿಗ್ಗಜರು ಕೂಗಿ ಅರಚುತ್ತಿದ್ದರು. ಅಂಬಿ ಅಣ್ಣನ ಹೆಂಡತಿ ಸುಮಲತಾ ಬಂದು ಸ್ವಾಭಿಮಾನ ಮತ ಕೇಳಿದ್ರು. ಕುಮಾರಸ್ವಾಮಿ ಸೇರಿ ಜೆಡಿಎಸ್‌ನ ಯಾರಿಗೂ ಸುಮಲತಾ ಗೆಲುವು ತಡೆಯಲಾಗಲಿಲ್ಲ ಎಂದರು.
ಮಂಡ್ಯದಿಂದ ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮುಂದಾಗಿದ್ದಾರೆ. ಸುಮಲತಾಗೆ ಮಾಯಾಂಗನೆ ಎಂದು ಜರಿದಿದ್ದ ಶಿವರಾಮೇಗೌಡ ಸುಮಲತಾ ಪರ ಮಾತಾಡುತ್ತಿದ್ದಾರೆ.