ನಾಗಮಂಗಲ : 2023ಕ್ಕೆ ನಮ್ಮ ತಂದೆಯವರು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುತ್ತಾರೆ , ತಂದೆಯವರಿಗೆ ಬೆಂಬಲ ಕೊಡಿ , ಇಡೀ ಹೋಬಳಿಯವರ ಆಶೀರ್ವಾದ ನಮ್ಮ ತಂದೆ ಮೇಲಿರಲಿ ಅಂತ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮನವಿ ಮಾಡಿದ್ದಾರೆ.
ನಾಗಮಂಗಲ ತಾಲೂಕಿನಲ್ಲಿ ನಡೆದ ಎಲ್ ಆರ್ ಎಸ್ ಸ್ವಾಭಿಮಾನಿ ಪರ್ವದಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರು ರಾಜಕೀಯಕ್ಕೆ ಬಂದು 40 ವರ್ಷಗಳಾಯಿತು , ಶಿವರಾಮೇಗೌಡರನ್ನು ಪಕ್ಷೇತರ ಅಭ್ಯರ್ಥಿ ಮಾಡಬೇಕು ಎಂದು ಪ್ರತೀ ತಾಲೂಕು ಹಳ್ಳಿಯಲ್ಲಿ ಎಲ್ ಆರ್ ಎಸ್ ಬಳಗ ಸುತ್ತಿ ಜನರ ಮನವೊಲೈಕೆಗೆ ಶ್ರಮಿಸಿದ್ದೇವೆ ಎಂದರು.
ಎಲ್ ಶಿವರಾಮೇಗೌಡರು ಜಿಲ್ಲಾ ಪಂಚಾಯತ್ ಸದಸ್ಯರಾದಾಗಲೂ ಸಹಿತ ಪಕ್ಷೇತರವಾಗಿ ಗೆಲ್ಲಿಸಿದ್ದೀರಿ, 6 ತಿಂಗಳು ಜೆಡಿಎಸ್ ಸಂಸದರನ್ನಾಗಿ ಮಾಡಿದ್ರು, ನಾನು ಆಗ ಕಾಂಗ್ರೆಸ್ನಲ್ಲಿದ್ದೆ ಹೀಗಾಗಿ ಒಂದು ಅಪವಾದ ನಮ್ಮ ಮೇಲಿತ್ತು ತಂದೆ ಒಂದು ಪಕ್ಷ, ಮಗ ಒಂದು ಪಕ್ಷ ಎಂದು ನಮ್ಮ ವಿರೋಧಿಗಳು ಇದರ ಉಪಯೋಗ ಪಡೆದರು. ಚೇತನ್ ಗೌಡ್ರೇ , ಅದಾದ ಮೇಲೆ ಇನ್ನು ಈ ಮಾತಿನಿಂದ ತಂದೆಯವರಿಗೆ ತೊಂದರೆಯಾಗಬಾರದು ಎಂದು ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ.
ನಂತರ ಬಿಂಡಿಗನವಿಲೆಯಲ್ಲಿ ಜಿಲ್ಲಾಪಂಚಾಯಿತಿಗೆ ಸ್ಪರ್ಧಿಸಬೇಕು ಎಂದು ಹಲವರು ಬಂದು ಒತ್ತಾಯಿಸಿದ್ರು , ಹೀಗಾಗಿ ಕುಟುಂಬದವರ ಜೊತೆಗೆ ಮಾತನಾಡಿ ನನ್ನ ಹೋಬಳಿ ಜನತೆಯ ಮಾತಿಗೆ ಒಪ್ಪಿದೆ, ಪಕ್ಷೇತರನಾಗಿ ಬಂದೆ, ಬಿಂಡಿಗನವಿಲ ಹೋಬಳಿ ಮಾದರಿಯಾಗಬೇಕು ಎಂಬುದೇ ನಮ್ಮ ಉದ್ದೇಶ ಅಂತ ಹೇಳಿದರು.
ಶಿವರಾಮೇಗೌಡರು ಉಚ್ಚಾಟಿತರಾದ ಮೇಲೆ ರಾಜಕೀಯ ಮುಗೀತು, ಶಿವರಾಮೇಗೌಡರು ರಾಜಕೀಯ ಕ್ಕೆ ಬರೋದಿಲ್ಲ ಎಂದವರಿಗೆ ಉತ್ತರ ಕೊಡಬೇಕಿದೆ. ಶಿವರಾಮೇಗೌಡರು ಅಡ್ಜಸ್ಮೆಂಟ್ ಮಾಡಿಕೊಳ್ತಾರೆ ಎಂದು ಹೇಳ್ತಾರೆ. ಆದ್ರೆ ಯಾವ ರೀತಿ ಅನ್ನೋದೆ ನಂಗೆ ಗೊತ್ತಿಲ್ಲ ಅಡ್ಜಸ್‌ಟ್ ಮೇಂಟ್ ಮಾಡೋದಾಗಿದ್ರೆ ಎಲ್ಲೋ ಹೋಗ್ತಿದ್ದರು ಎಂದರು.
2008ರಲ್ಲಿ ಪಕ್ಷದ ವರಿಷ್ಠರು 2 ಬಾರಿ ಸೋತಿದಕ್ಕೆ ಸಂಸದ ಸ್ಥಾನ ಕೊಡ್ತೇವೆ ಎಂದಿದ್ದಕ್ಕಾಗಿ ಎಲೆಕ್ಷನ್ ನಿಂದ ಹಿಂದೆ ಸರಿಬೇಕಾಯಿತು. ಅದು ಬಿಟ್ಟರೆ ಅಡ್ಜಸ್ಟ್ ಮೆಂಟ್ ಇಲ್ಲ. ಈ ಸಮಾವೇಶದ ಮೂಲಕ ಒಂದು ವಿಚಾರ ಸ್ಪಷ್ಟ ಪಡಿಸ್ತಿವಿ ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ ಶಿವರಾಮೇಗೌಡರು ಚುನಾವಣೆಗೆ ಬರೋದು ಖಚಿತ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಎ.ನಾಚೇನಳ್ಳಿಯಿಂದ ಬೃಹತ್ ಮೆರವಣಿಗೆ ಮೂಲಕ ಎಲ್ ಶಿವರಾಮೇಗೌಡರನ್ನು, ಚೇತನ್ ಗೌಡರನ್ನು ಬರಮಾಡಿಕೊಳ್ಳಲಾಯಿತು.