ಬೆಂಗಳೂರು: ವಿಧಾನಸೌಧದಲ್ಲಿ ಡಿಕೆ ಸುರೇಶ್‌ಗೂ ನಾನು ವಾರ್ನಿಂಗ್ ಮಾಡಿಲ್ಲ,ಅವರು ನನಗೆ ವಾರ್ನಿಂಗ್ ಮಾಡಿಲ್ಲಎಂದು ಎಂಬಿ ಪಾಟೀಲ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ವಿಧಾನಸೌಧದಲ್ಲಿ ಶಾಸಕಾಂಗ ಸಭೆ ಮುಗಿಸಿ ಹೊರಟಿದ್ದೆ, ಆಗ ಡಿಕೆ ಸುರೇಶ್ ಪ್ರೀತಿಯಿದ ಎಂ.ಬಿ.ಪಾಟೀಲ್ ರೇ ಎಂದು ಕರೆದರು ನಾನು ವಾಪಸ್ ಬಂದೆ.. ಆಗ ಗಟ್ಟಿಯಾಗಿ ಇರ್ರಿ ಎಂ.ಬಿ.ಪಾಟೀಲ್‌ರೇ ಅಂದ್ರು.. ನಿಮ್ಮ ಜೊತೆ ಆಮೇಲೆ ಮಾತಾಡ್ತೇನೆ ಅಂತ ನಾನು ಹೇಳಿದೆ.. ಇದನ್ನು ಬಿಟ್ಟು ನನಗೆ ವಾರ್ನಿಂಗ್ ಮಾಡಿದರು ಎನ್ನುವುದು ಸುಳ್ಳು , ವಾರ್ನಿಂಗ್ ಗೀರ್ನಿಂಗ್ ನಮ್ಮ ಡಿಕ್ಷನರಿಯಲ್ಲಿಯೇ ಇಲ್ಲ ಎಂದರು.
ವಾರ್ನಿಂಗ್ ನಾವು ಕೊಡ್ತೇವೇಯೇ ಹೊರತು ತಗೋಳೋದು ಇಲ್ಲ. ಇದನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸುವುದು ಬೇಡ. ಅವರು ನನ್ನ ಪ್ರೀತಿಯಿಂದ ಕರೆದಿದ್ದಾರೆ. ಪ್ರೀತಿಯಿಂದ ಗಟ್ಟಿಯಾಗಿ ಇರಿ ಎಂದು ಹೇಳಿದ್ದು ಅಷ್ಟೇ. ವಾರ್ನಿಂಗ್ ಮಾಡುವಂತಹದ್ದು ಯಾವುದು ಆಗಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದರು.
ನಮ್ಮ ಸಂಬಂಧ ಚೆನ್ನಾಗಿದೆ, ತಪ್ಪಾಗಿ ಬಿಂಬಿಸುವುದು ಬೇಡ. ಎಂ.ಬಿ.ಪಾಟೀಲ್ ಯಾರಿಗೂ ಹೆದರಿಲ್ಲ, ಹೆದರೋದೂ ಇಲ್ಲ , ಇನ್ನು ಸಿದ್ದರಾಮಯ್ಯ ಅವರು ಸಿಎಂ ಅವಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಎಂಬಿ ಪಾಟೀಲ್ ಪದೇ ಪದೇ ಅದನ್ನೇ ಕೇಳಬೇಡಿ, ನಾನು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಾಗಿದೆ ಎಂದರು.