ಮಂಡ್ಯ : ಸೂಟು ಬೂಟು ಧರಿಸಿ ಗಣರಾಜ್ಯೋತ್ಸವದಂದೇ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದ ಸ್ವತಂತ್ರ ಮಾಧವ್ ಕಿರಣ್ ಗೆ ಮಳವಳ್ಳಿಯ ಜನತೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಮಳವಳ್ಳಿಯ ದಂಡಿ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾಧವ್ ಕಿರಣ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದು, ಮಳವಳ್ಳಿಯಲ್ಲಿ ಗಣರಾಜ್ಯೋತ್ಸವದ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ರಾತ್ರೋ ರಾತ್ರಿ ಮಾಧವ್ ಕಿರಣ್ ಫ್ಲೇಕ್ಸ್‌ಗಳನ್ನ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಮೂಲ ಫ್ಲೇಕ್ಸ್ ಹರಿದು ರಾಜಕೀಯಕ್ಕೆ ಸ್ವಾಗತ ಮಾಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಕಾರ್ಪೋರೆಟ್ ಪಾಲಿಟಿಕ್ಸ್ ಮಾಡಲು ಬಂದ ಪಕ್ಷೇತರ ಅಭ್ಯರ್ಥಿಗೆ ಅವಮಾನ ಮಾಡಿದ್ದಾರೆ.
ಮಳವಳ್ಳಿಯಾದ್ಯಂತ ಹೊಸ ಪಕ್ಷೇತರ ಅಭ್ಯರ್ಥಿಯಿಂದ ಫ್ಲೆಕ್ಸ್ ಹಾಕಲಾಗಿದ್ದು, 17 ದಿನಗಳ ಕಾಲ ಪುರಸಭೆಯ ಅನುಮತಿ ಪಡೆದು ಮಾಧವ್ ಕಿರಣ್ ಫ್ಲೇಕ್ಸ್ ಹಾಕಿಸಿದ್ದರು. ಕಾರ್ಪೋರೆಟ್ ಪೊಲಿಟಿಕ್ಸ್ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಮಾಧವ್ ಕಿರಣ್ ಫ್ಲೆಕ್ಸ್ ರಾರಾಜಿಸುತ್ತಿತ್ತು. ಇದನ್ನು ಸಹಿಸದ ಸ್ಥಳಿಯ ರಾಜಕಾರಣಿಗಳೇ ಈ ರೀತಿ ಮಾಡಿದ್ದಾರೆ ಎಂದು ಮಾಧವ್ ಕಿರಣ್ ಆರೋಪಿಸಿದ್ದಾರೆ.