Monday, March 27, 2023
spot_img
- Advertisement -spot_img

ಸೂಟು ಬೂಟೂ ಧರಿಸಿ ಕಾರ್ಪೋರೇಟ್ ಪಾಲಿಟಿಕ್ಸ್ ಗೆ ಬಂದ ಮಾಧವ್ ಕಿರಣ್

ಮಂಡ್ಯ : ಕೋಮುಗಲಭೆ, ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬಡಜನರ ಬದುಕಿಗೆ ಸರ್ಕಾರ ಕತ್ತಲಾಗಿದೆ. ಪೊಳ್ಳು ಭರವಸೆ ನೀಡುತ್ತಾ ಜನರಿಗೆ ನೆರವಾಗದ ಸರ್ಕಾರದ ವಿರುದ್ಧ ಸ್ವತಂತ್ರವಾಗಿ ನಿಂತು ಗೆಲ್ಲಬೇಕೆಂದು ಪಣ ತೊಟ್ಟು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಾಧವ್ ಕಿರಣ್ ನಿಲ್ಲಲು ಸಿದ್ಧತೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕನ್ನು ಮಾದರಿ ಕ್ಷೇತ್ರ ಮಾಡಲು ಉದ್ದೇಶ ಇಟ್ಟುಕೊಂಡಿರುವ ಮಾಧವ್ ಕಿರಣ್ , ಮಂಡ್ಯ ಜನತೆ ಅಮೂಲ್ಯ ಮತವನ್ನು ಸ್ವತಂತ್ರ ಅಭ್ಯರ್ಥಿ ಮಾಧವ್ ಕಿರಣ್ ಗೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ . ಭರವಸೆ ನೀಡಲು ಬರ್ತಿಲ್ಲ, ಬದಲಾವಣೆ ಮಾಡಲು ಬರ್ತಿದ್ದೇವೆ ಎಂದು ಸ್ಲೋಗನ್ ಇಟ್ಟುಕೊಂಡು ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿಯಲು ಪ್ಲಾನ್ ಮಾಡಿದ್ದಾರೆ. ಇಂದು ಮಳವಳ್ಳಿಯ ದಂಡಿ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಜಕೀಯ ಹೆಜ್ಜೆ ಇಟ್ಟಿದ್ದಾರೆ.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಆಡಳಿತದಿಂದ ಜನ ರೋಸಿಹೋಗಿದ್ದು, ಬದಲಾವಣೆ ಬೇಕಾದರೆ ಹೊಸ ಅಭ್ಯರ್ಥಿ ಗೆಲ್ಲಿಸಬೇಕೆಂದು ಹೇಳುತ್ತಿರುವ ಮಾಧವ್ ಕಿರಣ್ ಕಾಂಗ್ರೆಸ್ , ಜೆಡಿಎಸ್‌ ಬಿಜೆಪಿ ಭರವಸೆ ನೀಡಿ ಸುಮ್ಮನಾಗುತ್ತಾರೆ, ಹಾಗಾಗಿ ನಾನು ಭರವಸೆ ನೀಡಲು ಬಂದಿಲ್ಲ, ರಾಜಕೀಯ ಸಂಪ್ರದಾಯ ವನ್ನು ಬದಲಿಸಿ ಹೊಸ ವ್ಯವಸ್ಥೆಯನ್ನು ಸಾರ್ವಜನಿಕರಿಗೆ , ಮತದಾರರಿಗೆ ಮನವರಿಕೆ ಮಾಡಲು ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಮಾದರಿ ಮಳವಳ್ಳಿಗಾಗಿ ಮಾಧವ್‌ ಕಿರಣ್ ಗೆ ಮತ ಹಾಕಿ ಎಂದು ಮನವಿ ಮಾಡಿರುವ ಅವರು, ಮುಂದಿನ ದಿನಗಳಲ್ಲಿ ನೀಡಲಿರುವ ಎಲ್ಲ ಯೋಜನೆಗಳನ್ನು ಫ್ಲೆಕ್ಸ್, ಬ್ಯಾನರ್ ಮೂಲಕವೇ ಹೇಳಲು ಹೊರಟಿದ್ದಾರೆ. ತಮ್ಮ ದೂರ ದೃಷ್ಟಿಯ ಆಲೋಚನೆಗಳನ್ನು ಜನರಿಗೆ ತಲುಪಿಸಲು ತಮ್ಮ ಕಾರ್ಯಕ್ರಮದ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಹಾಗೂ ಫ್ಲೆಕ್ಸ್, ಬ್ಯಾನರ್ ನಲ್ಲಿಯೇ ಪ್ರಿಂಟ್ ಹಾಕಿಸಿದ್ಧಾರೆ.

ಪ್ರವಾಸೋದ್ಯಮ, ಕೈಗಾರಿಕೋದ್ಯಮ, ಉದ್ಯೋಗಸೃಷ್ಟಿ , ಉತ್ತಮ ಶಿಕ್ಷಣ ಸಮರ್ಪಕ ರಸ್ತೆಗಳು, ನೀರಾವರಿ ಅಭಿವೃದ್ಧಿ ದಲ್ಲಾಳಿ ಮುಕ್ತ ಸಮಾಜ, ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ , ಮಹೀಳಾ ಸಬಲೀಕರಣಕ್ಕೆ ಒತ್ತು ಸೇರಿದಂತೆ ನಾನಾ ಯೋಜನೆಗಳು ಇವರ ಪಟ್ಟಿಯಲ್ಲಿದ್ದು, ಶಾಸಕರಾಗಿ ಆಯ್ಕೆ ಮಾಡಿದರೆ ಸರ್ಕಾರದ ಪ್ರತಿನಿಧಿಯಾಗಿ ಆಯ್ಕೆಯಾಗದಿದ್ದಲ್ಲಿ ಉದ್ಯಮಿಯಾಗಿ ತಮ್ಮ ಭರವಸೆಗಳನ್ನು ಈಡೇರಿಸುವ ಮಾತು ನೀಡಿದ್ದಾರೆ.

ಮೀಸಲು ಕ್ಷೇತ್ರವಾಗಿರುವ ಮಳವಳ್ಳಿಯಲ್ಲಿ ಕಳೆದ 24 ವರ್ಷಗಳಿಂದ ಇಬ್ಬರೇ ಜನಪ್ರತಿನಿಧಿಗಳು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಬಾರಿ ಮಾಧವ್ ಕಿರಣ್ ಸ್ಪರ್ಧೆಯಿಂದ ತ್ರಿಕೋನ ಸ್ಫರ್ಧೇ ಏರ್ಪಡುವ ಸಾಧ್ಯತೆ ಇದೆ, ಮಾಧವ್ ಕಿರಣ್ ಸದ್ಯ ಪಕ್ಷೇತರ ಅಭ್ಯರ್ಥೀ ಎಂದು ಘೋಷಿಸಿಕೊಂಡಿದ್ದು, ಮಳವಳ್ಳಿಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಇಂದಿನಿಂದ ರಾಜಕೀಯ ಜೀವನ ಆರಂಭಿಸುತ್ತೇನೆ , ರಾಜಕಾರಣದಲ್ಲಿ ಕಾರ್ಪೋರೆಟ್ ಸಿಸ್ಟಮ್ ಬರ್ಬೆಕು, ಭರವಸೆ ಅಲ್ಲಾ ಬದಲಾವಣೆ ತರಲು ರಾಜಕೀಯಕ್ಕೆ ಬಂದಿದ್ದೇನೆ, ಪ್ರವಾಸೋದ್ಯಮ,ಉದ್ಯೋಗಕ್ಕೆ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.

ಕಿಡಿಗೇಡಿಗಳು ನನ್ನ ಫ್ಲೆಕ್ಸ್ ಹೋಲ್ಡಿಂಗ್ಸ್ ನ್ನು ಹರಿದಿದ್ದಾರೆ, ಗಣರಾಜ್ಯೋತ್ಸವದ ಶುಭಾಷಯಕೋರಿ ಫ್ಲೆಕ್ಸ್ ಹಾಕಲಾಗಿತ್ತು, ನನ್ನ ರಾಜಕೀಯದ ಮೊದಲ ದಿನವೇ ಈ ರೀತಿ ಮಾಡಿದ್ದಾರೆ ಇದಕ್ಕೆಲ್ಲ ನಾನು ಹೆದರೊಲ್ಲ ನನ್ನನ್ನ ರಾಜಕೀಯವಾಗಿ ಎದುರಿಸಿ ಈ ರೀತಿಯಲ್ಲ ಎಂದು ಕಿಡಿಕಾರಿದರು.

Related Articles

- Advertisement -

Latest Articles