ವಿಜಯಪುರ: ಬಿಜೆಪಿ ಪಕ್ಷ ಅಲ್ಲ, ಇದು ಬಿಜಿನೆಸ್ ಜನತಾ ಪಾರ್ಟಿ ಆಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.ಸಹೋದರರ ಸವಾಲು ಎನ್ನಲು ನಾನು ಸಿನಿಮಾ ತೆಗೆಯುತ್ತಿಲ್ಲ, ನಮ್ಮ ಸಂಸಾರಿಕ ವಿಚಾರ ಬೇಡ, ತಂದೆ ಬಂಗಾರಪ್ಪ ಅವರು ನಮ್ಮ ಮನೆ ಪಂಚಾಯಿತಿಯನ್ನ ಈಗಾಗಲೇ ಮಾಡಿ ಮುಗಿಸಿದ್ದಾರೆ ಎಂದರು.
ಪದೇ ಪದೆ ಅದೇ ಹೇಳುವುದು ಸರಿಯಲ್ಲ, ನಾನು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕಿದ್ದೇನೆ, ಟಿಕೆಟ್ ಸಿಗುವ ವಿಶ್ವಾಸವಿದೆ, ಅದೇ ರೀತಿ ಕುಮಾರ್ ಬಂಗಾರಪ್ಪ ಅವರ ಪಕ್ಷದ ಪರ ಇರುತ್ತಾರೆ, ಅವರವರ ವಿಷಯ ಬಿಟ್ಟು ಬಿಡಿ ಎಂದು ಆ ವಿಷಯದ ಬಗೆಗಿನ ಚರ್ಚೆಗೆ ತೆರೆ ಎಳೆದರು.
ಬಿಜೆಪಿಯವರು ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಹೊಡೆಯುತ್ತಿದ್ದಾರೆ, ಬಿಜೆಪಿ ಪಕ್ಷ ದೇಶವನ್ನು ಆಳೋಕೆ ಬಂದಿಲ್ಲ, ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ನಲ್ಲಿ ಹೆಜ್ಜೆ ಇಡುವುದಕ್ಕೆ ಕಟೀಲ್‌ಗೆ ಯೋಗ್ಯತೆ ಇಲ್ಲ, ಅವರಿಗೆ ನಾಚಿಕೆ ಆಗಬೇಕು,
ಮುಸ್ಲಿಮರನ್ನು ದೂರು ಇಡುವ ಕೆಲಸ ಆಗುತ್ತಿದೆ. ಈ ಸಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರ ಹಿಂದುತ್ವದ ಅಜೆಂಡಾ ಸಂಪೂರ್ಣ ನೆಲ ಕಚ್ಚಿದೆ ಬಿಜೆಪಿಯವರು ಏನೇ ಬಾಲ ಬಿಚ್ಚಿದರೂ ಇನ್ನೂ ಮುಂದೆ ಯಶಸ್ವಿಯಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.