ನವದೆಹಲಿ: ಸಂವಿಧಾನ ಉಳಿಸಲು ಅಗತ್ಯಬಿದ್ದರೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಕರೆ ನೀಡಿದ್ದ ಕಾಂಗ್ರೆಸ್ ನಾಯಕ ರಾಜ ಪಟೇರಿಯಾ ಅವರನ್ನು ಪೊಲೀಸರಿ ಬಂಧಿಸಿದ್ದಾರೆ. ಸಂವಿಧಾನ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಿ ಎಂದು ರಾಜ ಪಟೇರಿಯಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಬಳಿಕ ರಾಜ ಪಟೇರಿಯಾ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರಲ್ಲಿ ಮನವಿ ಮಾಡಿದ್ದರು. ಗೃಹಸಚಿವರು ಹೇಳಿಕೆ ಸಂಬಂಧ ಎಫ್‌ಐಆರ್ ದಾಖಲಿಸಲು ಪನ್ನಾ ಪೊಲೀಸ್ ಠಾಣೆಗೆ ಆದೇಶಿಸಿದ್ದರು. ಅದರಂತೆ ಮಧ್ಯಪ್ರದೇಶ ಪನ್ನಾ ಜಿಲ್ಲೆ ಪವಯಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿತ್ತು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪಟೇರಿಯಾ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಜಾತಿ, ಧರ್ಮ, ಭಾಷೆ ಆಧಾರದಲ್ಲಿ ವಿಭಜನೆ ಮಾಡುತ್ತಿದ್ದಾರೆ. ದಲಿತ, ಆದಿವಾಸಿ, ಅಲ್ಪಸಂಖ್ಯಾತರಿಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ದಲಿತರು ಆತಂಕವನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಬದುಕುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಮೋದಿ ಹತ್ಯೆಗೆ ಸಿದ್ಧವಾಗಿರಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಬಿಜೆಪಿಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ ಪಟೇರಿಯಾ ಅವರು ತೇಪೆ ಹಚ್ಚುವ ಕೆಲಸ ಮಾಡಿದ್ದರು. ನಾನು ಗಾಂಧಿಯನ್ನು ನಂಬುವ ಮನುಷ್ಯನಾಗಿದ್ದು, ಆ ರೀತಿ ಮಾಡಲಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮೋದಿ ಅವರನ್ನು ಸೋಲಿಸುವ ಅರ್ಥದಲ್ಲಿ ಕೊಲ್ಲಿ ಎಂದು ಹೇಳಿದ್ದೇನೆ. ದಲಿತರು, ಆದಿವಾಸಿಗಳ ರಕ್ಷಣೆ ಮತ್ತು ನಿರುದ್ಯೋಗವನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂದು ಹೇಳಿದ್ದರು. ಆದ್ರೆ ಇಂದು ಪೊಲೀಸರು ಪಟೇರಿಯಾರನ್ನ ಬಂಧಿಸಿದ್ದರೆ.