Sunday, September 24, 2023
spot_img
- Advertisement -spot_img

ಲಂಚ ಸ್ವೀಕರಿಸುತ್ತಿದ್ದಾಗ ‘ರೆಡ್‌ಹ್ಯಾಂಡ್’ ಆಗಿ ಲೋಕಾಯುಕ್ತ ಬಲೆಗೆ ಶಿರಸ್ತೆದಾರ

ಬಾಗಲಕೋಟೆ : ರಾಜ್ಯದಲ್ಲಿ ಭ್ರಷ್ಟರಿಗೆ ಬಿಸಿ ಮುಟ್ಟಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೀಳಗಿಯಲ್ಲಿ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ಮಹಾಂತೇಶ ಹುರಕಡ್ಲಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ತಾಲೂಕಿನ ಸೀಮಿಕೇರಿ ಗ್ರಾಮದ ಮಂಜುನಾಥ ದಳವಾಯಿ ಎಂಬುವವರಿಂದ ಹತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಶಿರಸ್ತೆದಾರ ಹುರಕಡ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಸುನಗ ಗ್ರಾಮದಲ್ಲಿ ಇರುವ ಮಂಜುನಾಥ ಅವರ ಹೆಸರಿನಲ್ಲಿರುವ ಜಮೀನಿನ ಪಹಣಿಯಲ್ಲಿನ ಷರತ್ತುಗಳನ್ನು ಕಡಿಮೆ ಮಾಡಲು ಹತ್ತು ಸಾವಿರ ರೂ. ಬೇಡಿಕೆಯನ್ನು ಮಹಾಂತೇಶ ಇಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ‘ತಮಿಳುನಾಡಿಗೆ 15 ದಿನ ನೀರು ಹರಿಸಬೇಕೆಂಬುದು ಕಠೋರ ನಿರ್ಣಯ’

ಈ ಹಿನ್ನೆಲೆಯಲ್ಲಿ ನೊಂದ ಮಂಜುನಾಥ, ಲೋಕಾಯುಕ್ತರ ಮೊರೆ ಹೋಗಿದ್ದರು. ಅದರಂತೆ ಇಂದು ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದನ್ನವರ್ ಮಾರ್ಗದರ್ಶನದಲ್ಲಿ ಬಾಗಲಕೋಟೆಯ ಲೋಕಾಯುಕ್ತ ಡಿ ವೈ ಎಸ್ ಪಿ ಪುಷ್ಪಲತಾ. ಎನ್ ಅವರ ನೇತೃತ್ವದಲ್ಲಿ ಸಿಪಿಐ ಬಸವರಾಜ್ ಅವಟಿ ಹಾಗೂ ಬಸವಗೌಡ ಪಾಟೀಲ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles