ಬಾಗಲಕೋಟೆ: ಚಂದ್ರಯಾನ್ ಯೋಜನೆ ಕುರಿತಂತೆ ಫೋಟೋವೊಂದನ್ನು ಹಂಚಿಕೊಂಡಿದ್ದ ನಟ, ರಾಜಕಾರಣಿ ಪ್ರಕಾಶ್ ರಾಜ್ ಸಂಕಷ್ಟ ಎದುರಾಗಿದೆ. ಚಂದ್ರಯಾನ್-3 ಯೋಜನೆಗೆ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಶ್ರೀರಾಮಸೇನೆ ಸಂಘಟನೆ ದೂರು ನೀಡಿದೆ.
ದೂರಿನಲ್ಲಿ ‘ನಟ, ರಾಜಕಾರಣಿ ಪ್ರಕಾಶ್ ರಾಜ್ ಅವರು ಚಂದ್ರಯಾನ್-3 ಯೋಜನೆ ವಿರುದ್ಧ ಅಪಹಾಸ್ಯ ಮಾಡಿದ್ದಾರೆ. ಇಸ್ರೋ ವಿಜ್ಞಾನಿಗಳ ಕುರಿತು ವ್ಯಂಗ್ಯವಾಡಿದ್ದಾರೆ. ಇಡೀ ದೇಶದ ಜನತೆಯ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಂಡ ಎಸ್.ಟಿ.ಸೋಮಶೇಖರ್ ಬೆಂಬಲಿಗರ ದಂಡು
ಪ್ರಕಾಶ್ ರಾಜ್ ಇಸ್ರೋ ಮಾಜಿ ಅಧ್ಯಕ್ಷರ ಫೋಟೋ ಬಳಸಿದ್ದ ಕಾರ್ಟೂನ್ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಶ್ರೀರಾಮಸೇನೆ ಅಧ್ಯಕ್ಷ ನಂದು ಗಾಯಕ್‌ವಾಡ್ ನೇತೃತ್ವದಲ್ಲಿ ಸಂಘಟನೆ ದೂರು ನೀಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.
ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಜ್, ‘ನಾನು 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ, ಅಮೆರಿಕ ಗಗನಯಾನಿ ನೀಲ್ ಆರ್ಮಸ್ಟ್ರಾಂಗ್ ಅವರನ್ನು ಉಲ್ಲೇಖಿಸಿ ಹಳೆಯ ಜೋಕ್ ಟ್ವೀಟ್ ಮಾಡಿದ್ದೆ. ಅವರ ಸಾಧನೆಯನ್ನು ಕೇರಳದ ಚಾಯ್‌ವಾಲಾ ಒಬ್ಬ ಸಂಭ್ರಮಿಸುವ ಚಿತ್ರ ಅದು. ಆದರೆ ಇದರಲ್ಲಿ ಟ್ರೋಲ್‌ಗಳು ಯಾವ ಚಾಯ್‌ವಾಲಾನನ್ನು ಕಂಡರು?’ ಎಂದು ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.