Friday, September 29, 2023
spot_img
- Advertisement -spot_img

ʼಒನ್ ನೇಷನ್ ಒನ್ ಎಲೆಕ್ಷನ್ ಬೇಡ, ಒನ್ ನೇಷನ್ ಫ್ರೀ ಎಜುಕೇಶನ್ ಮಾಡಿʼ

ಹುಬ್ಬಳ್ಳಿ: ಒನ್ ನೇಷನ್ ಒನ್ ಎಲೆಕ್ಷನ್ ಬೇಡ, ಒನ್ ನೇಷನ್ ಫ್ರೀ ಎಜುಕೇಶನ್ ಮಾಡಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒನ್ ನೇಷನ್ ಒನ್ ಎಲೆಕ್ಷನ್, ಭಾರತ ಎಂದು ಹೆಸರು ಬದಲಾಯಿಸೋದು ಇತ್ಯಾದಿ ಗಿಮಿಕ್ ನಡೀತಿದೆ, ಮೇಕ್‌ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಶೈನಿಂಗ್ ಇಂಡಿಯಾ ಎಂಬಿತ್ಯಾದಿ ಇಂಡಿಯಾ ಪ್ರಮೋಟ್ ಮಾಡಿದ್ದು ಇವರೇ, ಈಗ ಭಾರತ ಪ್ರಮೋಟ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿ ಅವ್ರು ಪಾಪ್ಯುಲರ್ ಇದ್ದರೆ ಚುನಾವಣೆ ಬಂದಾಗ ಒಂದು ತಿಂಗಳು ಟಿವಿಯಲ್ಲಿ ಕಾಣಿಸಿಕೊಳ್ಳದಿರಲಿ, ಚುನಾವಣೆಯಲ್ಲಿ ಗೆದ್ದು ತೋರಿಸಲಿ, ಮೋದಿ ಮಾಡುತ್ತಿರುವ ಟ್ರಿಕ್ಸ್ ನಿಂದ ಮೋದಿ ಅವರಿಗೆ ಮತ್ತು ಬಿಜೆಪಿಗೆ ಲಾಭ ಆಗಿರಬಹುದು, ಆದರೆ ದೇಶಕ್ಕೆ ಒಂದು ರೂಪಾಯಿ ಲಾಭವು ಆಗಿಲ್ಲ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಏನು ಹೇಳಿಕೆ ನೀಡಿದರು ನನಗೆ ಗೊತ್ತಿಲ್ಲ, ಬಿಕೆ ಹರಿಪ್ರಸಾದ್ ಹಿರಿಯ ನಾಯಕರು, ಅದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಮೈತ್ರಿ ವಿಚಾರ ಬಹುತೇಕ ಪೂರ್ವ ನಿರ್ಧಾರಕವಾಗಿತ್ತು, ಈ ಮೈತ್ರಿಯೊಂದಿಗೆ ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಅನ್ನೋದು ಸಾಬೀತಾಗಿದೆ.ದೇಶದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಅಂದರೆ ಇಲ್ಲಿಯವರೆಗೂ ದೇಶ ಹಾಳಾಗಿತ್ತು ಅಂತನೇ ಅರ್ಥ ಅಲ್ಲವೇ ? ಎಂದು ಪ್ರಶ್ನಿಸಿದರು.

ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟವರು ತಮಿಳುನಾಡಿನವರು ಇದರ ವಿರುದ್ಧ ಕಾಂಗ್ರೆಸ್ ಬಹುತೇಕ ನಾಯಕರು ಹೇಳಿಕೆ ಕೊಟ್ಟಿದ್ದಾರೆ, ಬಿಜೆಪಿಯವರು ಅದೇ ಹೇಳಿಕೆಗಳನ್ನು ಕೊಡೋದನ್ನ ಮಾಡಿದ್ದಾರೆ, ಅವರೇನಾದ್ರೂ ಬೀದಿಗಿಳಿದು ಹೋರಾಟ ಮಾಡಿದ್ದಾರಾ ? ಇಷ್ಟು ಮಾತನಾಡುವ ಬಿಜೆಪಿ ನಾಯಕರು ಬೇಕಿದ್ದರೆ ತಮಿಳುನಾಡುವರೆಗೂ ಪಾದಯಾತ್ರೆ ಮಾಡಲಿ ಎಂದು ಸನಾತನ ಧರ್ಮದ ಕುರಿತ ಉದಯನಿಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles