ಬೆಂಗಳೂರು : ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಮತ್ತು ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ.
ಮೋದಿಯವರನ್ನು ಹೀಯಾಳಿಸಿದ ಖರ್ಗೆ ಧೃತರಾಷ್ಟ್ರ, ಖರ್ಗೇಯವರ ಪುತ್ರ ವ್ಯಾಮೋಹದಿಂದ ಕಲಬುರ್ಗಿ ಪರಿಸ್ಥಿತಿ ಹೇಗಾಗಿದೆ ಎಂತ ಇಡೀ ರಾಜ್ಯಕ್ಕೆ ಗೊತ್ತು. ಪುತ್ರ ವ್ಯಾಮೋಹದಿಂದ ಬೇರೆಯವರಿಗೆ ಸಚಿವ ಸ್ಥಾನ ಕೊಡಿಸದೇ ಪುತ್ರನಿಗೆ ಕೊಡಿಸಿದರು. ನಂತರ ಸೋನಿಯಾಗಾಂಧಿ ಅವರಿಗೂ ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರನಂತೆ ಕಣ್ಣು ಕುರುಡಾಗಿದೆ ಎಂದರು.ಅವರ ಕುಟುಂಬದವರೇ ಉನ್ನತ ಹುದ್ದೆ ಅಲಂಕರಿಸಬೇಕು, ರಾಷ್ಟ್ರಾಧ್ಯಕ್ಷರ ಹುದ್ದೆಗೆ ಬರಬೇಕು ಅಮತ ಬಯಸೋರು ಸೋನಿಯಾಗಾಂಧಿ ಎಂದರು.
ಮೋದಿಯವರ ಜನಪರ ಕಾರ್ಯಗಳು ಸೋನಿಯಾಗಾಂಧಿ, ಖರ್ಗೆಯವರಿಗೆ ಸಹಿಸಲಾಗುತ್ತಿಲ್ಲ ಎಂದರು. ಮೋದಿಯವರನ್ನು ರಾವಣನಿಗೆ ಹೋಲಿಸಿದ ಖರ್ಗೆಯವರು ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇನ್ನೂ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ರಾವಣ ಎಂಬ ಶಬ್ದ ಬಳಸಿ ಕಾಂಗ್ರೆಸ್ ಸಂಸ್ಕೃತಿ ಅನಾವರಣ ಮಾಡಿದ್ದಾರೆ ಎಂದರು.ಹಿಂದೂಗಳನ್ನು ಟೀಕಿಸೋದು ಸುಲಭ ಅಂದುಕೊಂಡಿದ್ದಾರೆ, ನಮಗೆ ಹಿಂದೂಗಳ ಮತ ಬೇಡ ಎಂದು ಕಾಂಗ್ರೆಸ್ ಪ್ರಣಾಣಿಕೆಯಲ್ಲಿ ತಿಳಿಸಲಿ ಎಂದರು.