Sunday, March 26, 2023
spot_img
- Advertisement -spot_img

ದಯವಿಟ್ಟು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ : ಪ್ರಧಾನಿಯವರಿಗೆ ಮಮತಾ ಬ್ಯಾನರ್ಜಿ ಸಲಹೆ

ಕೋಲ್ಕತ್ತಾ: ನಿಮ್ಮ ತಾಯಿ ಎಂದರೆ ನಮಗೂ ತಾಯಿಯೇ, ದಯವಿಟ್ಟು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಭಾವನಾತ್ಮಕವಾಗಿ ಪ್ರಧಾನಿ ಮೋದಿಯವರಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.

ನನ್ನ ಸಂತಾಪ ಮತ್ತು ಸಂದೇಶಗಳನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಇತರರಿಗೆ ಹೇಗೆ ತಿಳಿಸಬೇಕು ಎಂದು ತೋಚುತ್ತಿಲ್ಲ ಎಂದು ಭಾವುಕರಾದರು. ಪಶ್ಚಿಮ ಬಂಗಾಳದ ಜನರ ಪರವಾಗಿ, ನಮಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮ ತಾಯಿ ಎಂದರೆ ನಮಗೂ ತಾಯಿ. ಈ ಸಂದರ್ಭ ನಾನು ನನ್ನ ತಾಯಿಯನ್ನೂ ನೆನಪಿಸಿಕೊಳ್ಳುತ್ತೇನೆ ಎಂದರು.

ನಿಮ್ಮ ಕೆಲಸವನ್ನು ಮುಂದುವರಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಂಡರು. ಮೋದಿಯವರ ತಾಯಿ ಹೀರಾಬೆನ್ ಮೋದಿ ಇಂದು ಮುಂಜಾನೆ ನಿಧನರಾದರು. ಮೋದಿ ತಾಯಿಯ ಎಲ್ಲಾ ಅಂತಿಮ ಸಂಸ್ಕಾರವನ್ನು ಮುಗಿಸಿ ತಮ್ಮ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ.

ಇಂದು ಪಶ್ಚಿಮ ಬಂಗಾಳದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ ಇತರ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮೋದಿ ಬಂಗಾಳ ಭೇಟಿ ನೀಡಬೇಕಿತ್ತು. ಆದರೆ ತಮ್ಮ ತಾಯಿಯ ಮರಣದ ಹಿನ್ನೆಲೆ ಬಂಗಾಳ ಭೇಟಿಯನ್ನು ರದ್ದುಗೊಳಿಸಿದ್ದರು.

Related Articles

- Advertisement -

Latest Articles